ವಿಜಯವಾಡ: ಚುನಾವಣೆಗೂ ಮುನ್ನ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಆಂಧ್ರ ಪ್ರದೇಶ ಭೇಟಿ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಲೂನ್ ಹಾರಿಸಿದ್ದನ್ನು ಭದ್ರತಾ ಲೋಪ ಎಂದು ಬಿಜೆಪಿ ಹೇಳುತ್ತಿದೆ. ಆದಾಗ್ಯೂ, ಭದ್ರತಾ ಲೋಪವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಪ್ರತಿಭಟನೆಗಾಗಿ ನಾಲ್ಕು ನಾಲ್ವರು ಕಾಂಗ್ರೆಸ್ ಮುಖಂಡರು ಬಂಧಿಸಿದ್ದಾರೆ.
ಮೋದಿ ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ರಾಜ್ಯಕ್ಕೆ ನೀಡಿದ್ದ ಭರವಸೆ ಈಡೇರಿಸಿಲ್ಲ ಎಂದು ಪ್ರತಿಭಟನೆಯ ಸಂಕೇತವಾಗಿ ಎಪಿ ಕಾಂಗ್ರೆಸ್ ಸಮಿತಿ ಕಪ್ಪು ಬಲೂನ್‌ಗಳನ್ನು ಗಾಳಿಯಲ್ಲಿ ಬಿಡಲು ಕರೆ ನೀಡಿತ್ತು. ಎರಡು ದಿನಗಳ ಹೈದರಾಬಾದ್ ಭೇಟಿಯನ್ನು ಮುಗಿಸಿದ ನರೇಂದ್ರ ಮೋದಿ, ಬೆಳಿಗ್ಗೆ ಗನ್ನವರಂ ವಿಮಾನ ನಿಲ್ದಾಣಕ್ಕೆ ಆಗಮಿಸಿದರು, ಅಲ್ಲಿ ರಾಜ್ಯಪಾಲ ಬಿಸ್ವ ಭೂಷಣ ಹರಿಚಂದನ್, ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಅವರನ್ನು ಸ್ವಾಗತಿಸಿದರು.
ಅಲ್ಲಿಂದ ಎಂಐ-17 ಹೆಲಿಕಾಪ್ಟರ್‌ನಲ್ಲಿ ಭೀಮಾವರಂ ಸಮೀಪದ ಅಮೀರಂ ಗ್ರಾಮಕ್ಕೆ ಆಗಮಿಸಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿತ್ತು. ಮೋದಿ ಆಗಮನಕ್ಕೆ ಕೆಲವು ನಿಮಿಷಗಳ ಮೊದಲು ಮೋದಿ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಲೂನ್ ಗಳನ್ನು ಹಿಡಿದು ವಿಮಾನ ನಿಲ್ದಾಣದ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ.
ತಕ್ಷಣ, ಕಾಂಗ್ರೆಸ್ ಮುಖಂಡರಾದ ಸುಂಕರ ಪದ್ಮಶ್ರೀ, ಚಲ್ಲಾ ಸಾವಿತ್ರಿ ಮತ್ತು ಕಿಶೋರ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದೇವೆ ಮತ್ತು ಐಪಿಸಿ ಸೆಕ್ಷನ್ 353, 341, 188, ಮತ್ತು 145 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ ಎಂದು ಕೃಷ್ಣಾ ಜಿಲ್ಲಾ ಎಸ್ಪಿ ಪಿ ಜಶುವ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಆದಾಗ್ಯೂ, ಮೋದಿ ಮತ್ತಿತರಿದ್ದ ಹೆಲಿಕಾಫ್ಟರ್ ಟೇಕಾಫ್ ಆಗುತ್ತಿದ್ದಂತೆ ಇತರ ಕೆಲವು ಮುಕಂಡರು ಕಟ್ಟಡದ ಟೆರೇಸ್‌ನಿಂದ ಕಪ್ಪು ಬಲೂನ್‌ಗಳನ್ನು ಬಿಡುವಲ್ಲಿ ಯಶಸ್ವಿಯಾದರು,