ತಿರುವನಂತಪುರ: ಕೆ.ಕೆ.ರೆಮ ವಿರುದ್ಧದ ಹೇಳಿಕೆಗೆ ಬದ್ಧ ಎಂದು ಎಂ.ಎಂ.ಮಣಿ ಹೇಳಿದ್ದಾರೆ. ಹೇಳಿಕೆ ಹಿಂಪಡೆಯುವುದಿಲ್ಲ. ಟೀಕೆಗಳಿಗೆ ಕಿವಿಗೊಡಲು ಸಿದ್ಧರಿಲ್ಲದವರು ವಿಧಾನಸಭೆಗೆ ಬರುವುದು ಬೇಡ ಎಂದು ಮಣಿ ಹೇಳಿರುವರು.
ಸಭ್ಯ ಭಾಷೆಯಲ್ಲಿ ಟೀಕಿಸಿರುವೆ. ಆಕೆ ವಿಧವೆಯೇ ಎಂದು ಕೇಳಿದ್ದು ವಿರೋಧ ಪಕ್ಷದಿಂದಲೇ. ವಿಧವೆ ಎಂದೂ ಹೇಳಿದರು. ಕೆ.ಕೆ.ರೆಮ ಮುಖ್ಯಮಂತ್ರಿ ವಿರುದ್ಧ ಅವಾಚ್ಯ ಶಬ್ದಗಳಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಜನತಾದಳಕ್ಕೆ ಸೀಟು ಕೊಟ್ಟಿದ್ದರಿಂದಲೇ ಕೆ.ಕೆ.ರೆಮ ಅವರು ವಿಧಾನಸಭೆಗೆ ಬಂದರು ಎಂದು ಎಂ.ಎಂ.ಮಣಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ವಿರುದ್ಧವೂ ಎಂ.ಎಂ.ಮಣಿ ಕಟು ಶಬ್ದ ಬಳಸಿದ್ದಾರೆ. ಕೆ ಸುಧಾಕರನ್ ಒಬ್ಬ ಪುಂಡ. ಕೊಲೆಯನ್ನು ಸಮರ್ಥಿಸುತ್ತಿದ್ದಾರೆ ಎಂದರು.
ಎಂಎಂ ಮಣಿ ಅವರು ಕೆ.ಕೆ. ರೆಮ ವಿರುದ್ಧ ನಿಂದನಾತ್ಮಕ ಹೇಳಿಕೆಗಳಿಗಾಗಿ ವಿವಿಧ ವಲಯಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಎಂ.ಎಂ.ಮಣಿ ಅವರ ಹೆಸರನ್ನು ಪ್ರಸ್ತಾಪಿಸದೆ ಕೆ.ಸುಧಾಕರನ್, ‘ಕಮ್ಯುನಿಸಂನ ವಿಚಾರಧಾರೆಗಳು ವ್ಯಕ್ತಿಯನ್ನು ಎಷ್ಟು ರಾಕ್ಷಸರನ್ನಾಗಿಸುತ್ತದೆ ಎಂಬುದಕ್ಕೆ ಒಬ್ಬ ಕೆಟ್ಟ ರಾಜಕಾರಣಿಯೇ ಉತ್ತಮ ಉದಾಹರಣೆ’ ಎಂದು ಹೇಳಿದರು. ಕೇರಳದ ಮಣ್ಣಿನಲ್ಲಿ ನೀಚ ಜನ್ಮವೂ ಬದುಕುತ್ತಿದೆ ಎಂದು ಸುಧಾಕರನ್ ಹೇಳಿದರು.