ಕಾಸರಗೋಡು: ವಿದ್ಯಾನಗರ ಚಿನ್ಮಯ ವಿದ್ಯಾಲಯದಲ್ಲಿ ವನಮಹೋತ್ಸವದ ಅಂಗವಾಗಿ ಸಯನ್ಸ್ ಕ್ಲಬ್ ನ ವತಿಯಿಂದ ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳು ವಿವಿಧ ಪ್ರಭೇದಗಳ ತರಕಾರಿ ಬೀಜಗಳನ್ನು ಬಿತ್ತಿ ತರಕಾರಿ ತೋಟವನ್ನು ನಿರ್ಮಿಸಲಾಗಿದೆ.
ಚಿನ್ಮಯ ಮಿಷನ್ ಕೇರಳ ರಾಜ್ಯದ ಮುಖ್ಯಸ್ಥ ಹಾಗೂ ಚಿನ್ಮಯ ವಿದ್ಯಾಲಯದ ಅಧ್ಯಕ್ಷ ಪೂಜ್ಯ ಸ್ವಾಮಿ ವಿವಿಕ್ತಾನಂದ ಸರಸ್ವತೀ ಬೀಜಗಳನ್ನು ಬಿತ್ತುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಂಶುಪಾಲರು ಡಾ. ಬಿಜು ಮಡತ್ತಿಲ್, ಉಪ ಪ್ರಾಂಶುಪಾಲೆ ಪದ್ಮಾವತಿ, ಮುಖ್ಯ ಶಿಕ್ಷಕಿಯರಾದ ಸಿಂಧು ಶಶೀಂದ್ರ, ಪೂರ್ಣಿಮ ಕೆ.ಎಸ್, ಕಾರ್ಯಕ್ರಮದ ಸಂಘಟಕಿ ಜಯಶ್ರೀ ಪಲೇರಿ ಅಧ್ಯಾಪಿಕೆಯರಾದ ಜಾನಕಿ, ಅಮಿತ ಡಿ ರಾವ್, ಶ್ರೀಕಲ, ಉಷಾ, ಪ್ರಿಯಾಂಕ ಉಪಸ್ಥಿತರಿದ್ದರು.