ಕೊಚ್ಚಿ: ವಡಕಂಚೇರಿ ಲೈಫ್ ಮಿಷನ್ ಯೋಜನೆಗೆ ಸಂಬಂಧಿಸಿದ ರಹಸ್ಯ ನಿರ್ಧಾರಗಳನ್ನು ಕ್ಲಿಫ್ ಹೌಸ್ ನಲ್ಲಿ ತೆಗೆದುಕೊಳ್ಳಲಾಗಿತ್ತು ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ. ನಿಯಮ ಉಲ್ಲಂಘಿಸಿ ವಿದೇಶಿ ನಿಧಿ ಸ್ವೀಕರಿಸಿ ಯೋಜನೆಗೆ ಕಮಿಷನ್ ಪಡೆದ ಪ್ರಕರಣದಲ್ಲಿ ಸಿಬಿಐನ ಮೊದಲ ದಿನದ ವಿಚಾರಣೆ ಪೂರ್ಣಗೊಂಡ ಬಳಿಕ ಈ ಪ್ರತಿಕ್ರಿಯೆ ನೀಡಿರುವಳು. ಮುಖ್ಯಮಂತ್ರಿಗಳು ರಾತ್ರಿ 7 ಗಂಟೆಗೆ ಕ್ಲಿಫ್ ಹೌಸ್ ತಲುಪಿದ ನಂತರ ಇಂತಹ ಎಲ್ಲಾ ರಹಸ್ಯ ಚರ್ಚೆಗಳು ನಡೆದವು. ಅವರು ಯುಎಇ ಕಾನ್ಸುಲ್ ಜನರಲ್ ಜೊತೆಗೆ ಇಂತಹ ಚರ್ಚೆಗಳಲ್ಲಿ ಭಾಗವಹಿಸಿದರು. ಮುಖ್ಯಮಂತ್ರಿ ಜತೆ ಎಂ.ಶಿವಶಂಕರ್ ಕೂಡ ಚರ್ಚೆಯಲ್ಲಿ ಭಾಗವಹಿಸಿದ್ದರು.
ಯೋಜನೆಯ ತಿಳುವಳಿಕೆ ಪತ್ರಕ್ಕೆ ಸೆಕ್ರೆಟರಿಯೇಟ್ ನಲ್ಲಿ ಸಹಿ ಹಾಕಲಾಯಿತಾದರೂ ಕ್ಲಿಫ್ ಹೌಸ್‍ನಲ್ಲಿ ರಹಸ್ಯ ಚರ್ಚೆಯ ನಂತರ ಅಧಿಕೃತ ಮಟ್ಟದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳನ್ನು ಬದಲಾಯಿಸಲಾಯಿತು. ಈ ಯೋಜನೆಯ ಗುತ್ತಿಗೆಯನ್ನು ಯುನಿಟಾಕ್ ಕಂಪನಿಗೆ ನೀಡಲು ಎಂ.ಶಿವಶಂಕರ್ ಅವರು ಲಂಚವಾಗಿ ಸ್ವೀಕರಿಸಿದ ಒಂದು ಕೋಟಿ ರೂಪಾಯಿ ಬ್ಯಾಂಕ್ ಲಾಕರ್‍ನಲ್ಲಿ ತಮ್ಮ ಮತ್ತು ಶಿವಶಂಕರ್ ಅವರ ಚಾರ್ಟರ್ಡ್ ಅಕೌಂಟೆಂಟ್ ಹೆಸರಿನಲ್ಲಿ ಶೇಖರವಾಗಿದೆ ಎಮದು ಸ್ವಪ್ನಾ ಹೇಳಿರುವಳು.
ಇದಕ್ಕೆ ಸಂಬಂಧಿಸಿದ ಎಲ್ಲ ವಿವರಗಳನ್ನು ಸಿಬಿಐಗೆ ಹಸ್ತಾಂತರಿಸಲಾಗಿದ್ದು, ಇದೇ 21ರಂದು ವಿಚಾರಣೆ ಮುಂದುವರಿಯಲಿದೆ ಎಂದು ಸ್ವಪ್ನಾ ತಿಳಿಸಿದ್ದಾರೆ. ವಡಕಂಚೇರಿ ಯೋಜನೆಯ ನಂತರ, ಶಿವಶಂಕರ್ ಕೇರಳದ ಲೈಫ್ ಮಿಷನ್‍ನ ಭಾಗವಾಗಿ ಯುನಿಟಾಕ್ ಗೆ ಇತರ ನಿರ್ಮಾಣ ಗುತ್ತಿಗೆಗಳನ್ನು ನೀಡಲು ನಿರ್ಧರಿಸಿದ್ದರು ಎಂದು ಸ್ವಪ್ನಾ ಬಹಿರಂಗಪಡಿಸಿದ್ದಾರೆ.