ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಗ್ರಸ್ಥಾನದಲ್ಲಿ ಚೀನಾ ಇದ್ದು, ಎರಡನೇ ಸ್ಥಾನದಲ್ಲಿ ಭಾರತವಿದೆ. ಆದರೆ ಭಾರತದ ಬಗ್ಗೆ ವಿಶ್ವಸಂಸ್ಥೆ ನೀಡಿರುವ ವರದಿ ಇದೀಗ ಬೆಚ್ಚಿ ಬೀಳಿಸುವಂತಿದೆ. ವಿಶ್ವ ಜನಸಂಖ್ಯಾ ದಿನದ ಅಂಗವಾಗಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಜನಸಂಖ್ಯೆ ಹೆಚ್ಚಿರುವ ಹಾಗೂ ಹೆಚ್ಚಾಗುತ್ತಿರುವ ದೇಶಗಳನ್ನು ಆಯ್ಕೆ ಮಾಡಿಕೊಂಡಿದೆ.
ಚೀನಾ ಮೊದಲ ಸ್ಥಾನದಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ, 2ನೇ ಸ್ಥಾನ ಭಾರತ ಭಾರತವಿದ್ದು, ಹೆಚ್ಚಾಗುತ್ತಿರುವ ಜನಸಂಖ್ಯೆ ಬಗ್ಗೆ ವಿಶ್ವಸಂಸ್ಥೆ ನೀಡಿರುವ ವರದಿಯಲ್ಲಿ ಭಾರತ ಜನಸಂಖ್ಯೆ ನಿಯಂತ್ರಣಕ್ಕೆ ಗಮನ ಹರಿಸಬೇಕಿದೆ. 2022ರ ಸಾಲಿನಲ್ಲಿ ನವಂಬರ್ ಮಧ್ಯದ ವೇಳೆ ಎಂಟು ಶತಕೋಟಿ ಜನಸಂಖ್ಯೆ ಹೆಚ್ಚಾಗಲಿದ್ದಾರೆ. ವಿಶ್ವದಾದ್ಯಂತ 2030ರಲ್ಲಿ ಇದು 8.5 ಶತಕೋಟಿ ಮತ್ತು 2050 ರಲ್ಲಿ 9.7 ಶತಕೋಟಿ ಜನಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಿದೆ.
ಎರಡನೇ ಮಹಾಯುದ್ಧದ ನಂತರ ನಿಧಾನಗತಿಯಲ್ಲಿ ಜನಸಂಖ್ಯೆ ಏರಿಕೆ ಇತ್ತು. ಆ ನಂತರ ಅತಿ ಶೀಘ್ರ ಏರಿಕೆ ಕಂಡುಬಂದಿತ್ತು. ಇದು ಹೀಗೇ ಮುಂದುವರಿದರೆ 2080ರಲ್ಲಿ 10.4 ಶತಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಭಾರತಕ್ಕೆ ಬಂದರೆ ಇಲ್ಲಿ ಜನಸಂಖ್ಯೆ ವೇಗದ ಗತಿಯಲ್ಲಿ ಬೆಳೆಯುತ್ತಿದ್ದು, 2023ರವೇಳೆಗೆ ಚೀನಾವನ್ನೇ ಹಿಂದಿಕ್ಕಲಿದೆ ಎಂದು ಹೇಳಿದೆ. ಜುಲೈ 11 ರಂದು ವಿಶ್ವಜನಸಂಖ್ಯಾ ದಿನವನ್ನಾಗಿ ಆಚರಿಸಲಾಗುವುದು. ಈ ನಡುವೆ ಭೂಮಿ ಮೇಲಿನ 8 ಶತಕೋಟಿ ನಿವಾಸಿಗಳ ಉತ್ತಮ ಜೀವನವನ್ನು ವಿಶ್ವಸಂಸ್ಥೆ ಬಯಸಲಿದ್ದು, ಇದರೊಂದಿಗೆ ಆರೋಗ್ಯದಲ್ಲಿ ಪ್ರಗತಿ ಮತ್ತು ತಾಯಿ ಮತ್ತು ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸಬೇಕೆಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಸಂದೇಶ ನೀಡಿದ್ದಾರೆ.