ನವದೆಹಲಿ: ಉತ್ತರ ಕೇರಳದ ರೈಲ್ವೆ ಭೂಮಿಯಲ್ಲಿ ಮುತ್ತಪ್ಪನ್ ಮಡಪ್ಪುರ(ದೈವ ಕೊಟ್ಟಿಗೆ) ಗಳ ವಿಚಾರವನ್ನು ಸಹಾನುಭೂತಿಯಿಂದ ಪರಿಗಣಿಸಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವನಿ ವೈಷ್ಣವ್ ಹೇಳಿದ್ದಾರೆ.
ಕೇಂದ್ರ ಸಚಿವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗಕ್ಕೆ ಈ ಭರವಸೆ ನೀಡಿರುವರು.
ರೈಲ್ವೆ ಪ್ರಯಾಣಿಕರ ಸೌಕರ್ಯ ಸಮಿತಿ ಅಧ್ಯಕ್ಷ ಪಿ.ಕೆ.ಕೃಷ್ಣದಾಸ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ನೇತೃತ್ವದಲ್ಲಿ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಇದಕ್ಕೂ ಮುನ್ನ ಬಿಜೆಪಿ ಮುಖಂಡರು ವಿವಿಧ ದೇವಸ್ಥಾನ ಸಮಿತಿಗಳೊಂದಿಗೆ ಸಭೆ ನಡೆಸಿದ್ದರು. ಬಿಜೆಪಿ ನಾಯಕತ್ವವು ಸಾವಿರಾರು ಭಕ್ತರ ಅಗತ್ಯತೆಗಳಿಗೆ ಸಹಾನುಭೂತಿಯ ಮಾರ್ಗವನ್ನು ತೆಗೆದುಕೊಳ್ಳುವಂತೆ ರೈಲ್ವೆಗೆ ವಿನಂತಿಸಿದೆ. ಭಕ್ತರ ಸಮಸ್ಯೆಯನ್ನು ಪರಿಗಣಿಸುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ ಎಂದು ಪಿ.ಕೆ.ಕೃಷ್ಣದಾಸ್ ತಿಳಿಸಿದ್ದಾರೆ.
ರೈಲ್ವೇ ಭೂಮಿಯಲ್ಲಿರುವ ಮುತ್ತಪ್ಪನ್ ಮಡಪ್ಪುರಗಳನ್ನು ಸಹಾನುಭೂತಿಯಿಂದ ನಡೆಸಿಕೊಳ್ಳಲಾಗುವುದು: ರೈಲ್ವೆ ಸಚಿವ
0
ಜುಲೈ 29, 2022
Tags