ಬದಿಯಡ್ಕ: ಪ್ರಸಿದ್ಧ ಜನಪರ ವೈದ್ಯ ಡಾ. ಶ್ರೀನಿಧಿ ಸರಳಾಯ ಬದಿಯಡ್ಕ ಇವರ ಶ್ರೀನಿಧಿ ಕ್ಲಿನಿಕ್‍ನಲ್ಲಿ ಆಟಿ ಅಮಾಸ್ಯೆಯ ದಿನ ಹಾಲೆಮರದ ಕೆತ್ತೆಯ ಕಷಾಯ ವಿತರಿಸಲಾಯಿತು. ಸತತ 12 ವರ್ಷಗಳಿಂದ ಅವರು ಈ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪ್ರಾತಃಕಾಲದಲ್ಲಿ ಹಾಲೆ ಮರದ ಕೆತ್ತೆಯಿಂದ ಕಷಾಯವನ್ನು ತಯಾರಿಸಿ ತನ್ನ ಚಿಕಿತ್ಸಾಯದಲ್ಲಿ ಉಚಿತವಾಗಿ ವಿತರಿಸಿದರು. ಡಾ.ಬೇ.ಸೀ. ಗೋಪಾಲಕೃಷ್ಣ ಭಟ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬದಿಯಡ್ಕ ವಲಯ ಮೇಲ್ವಿಚಾರಕ ದಿನೇಶ್ ಕೊಕ್ಕಡ, ನಿವೃತ್ತ ಅಧ್ಯಾಪಕ ನಾರಾಯಣ ಭಟ್ ಮೈರ್ಕಳ, ರಾಘವೇಂದ್ರ ಅಮ್ಮಣ್ಣಾಯ ಹಾಗೂ 300ಕ್ಕೂ ಹೆಚ್ಚು ಮಂದಿ ಕಷಾಯವನ್ನು ಸ್ವೀಕರಿಸಿದ್ದರು.
ಬದಿಯಡ್ಕ ಶ್ರೀನಿಧಿ ಕ್ಲಿನಿಕ್ ನಲ್ಲಿ ಆಟಿಕಷಾಯ ವಿತರಣೆ
0
ಜುಲೈ 30, 2022