HEALTH TIPS

ಕೊರೋನಾದಂತೆ, ಮಂಕಿಪಾಕ್ಸ್ ನಿಯಂತ್ರಿಸಲು ಸಾಧ್ಯ: ಗಾಬರಿಬೇಡ ಮಂಕಿಪಾಕ್ಸ್ ಬಗ್ಗೆ ಸಿಎಂ ಪಿಣರಾಯಿ ವಿಜಯನ್

                    ತಿರುವನಂತಪುರ: ಕೇರಳದಲ್ಲಿ ಮಂಗನ ಕಾಯಿಲೆ ಇರುವುದು ದೃಢಪಟ್ಟಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ರಾಜ್ಯದಲ್ಲಿ ಮಂಗನ ಕಾಯಿಲೆ ದೃಢಪಟ್ಟಿದೆ. ಯುಎಇಯಿದ ಆಗಮಿಸಿದ ಕೊಲ್ಲಂ ಮೂಲದ ವ್ಯಕ್ತಿಗೆ  ಕಾಯಿಲೆಯನ್ನು ದೃಢಪಡಿಸಲಾಗಿದೆ. ರೋಗಲಕ್ಷಣಗಳು ಕಾಣಿಸಿಕೊಂಡ ತಕ್ಷಣ, ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಪ್ರತ್ಯೇಕವಾಗಿ ಇರಿಸಲಾಯಿತು. ಆತನ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇಡಲಾಗಿದೆ. ರೋಗಿಯ ಸ್ಥಿತಿ ತೃಪ್ತಿಕರವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

               ಮಂಕಿಪಾಕ್ಸ್‍ನ ಒಂದೇ ರೀತಿಯ ಲಕ್ಷಣಗಳನ್ನು ಹೊಂದಿರುವ ಜನರನ್ನು ಪರೀಕ್ಷಿಸುವ ಮೂಲಕ ಕಣ್ಗಾವಲು ಬಲಪಡಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆರೋಗ್ಯ ಇಲಾಖೆ ನೀಡುವ ಮಾರ್ಗಸೂಚಿಗಳನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮತ್ತು ಸಾಬೂನಿನಿಂದ ಕೈ ತೊಳೆಯುವುದನ್ನು ರೂಢಿಸಿಕೊಳ್ಳಬೇಕು. ಗಾಬರಿಗೆ  ಯಾವುದೇ ಕಾರಣವಿಲ್ಲ. ಕೊರೊನಾ ರೀತಿಯಲ್ಲಿ ಮಂಗನ ಕಾಯಿಲೆಯನ್ನು ತಡೆಯಬಹುದು ಎಂದು ಮುಖ್ಯಮಂತ್ರಿ ಹೇಳಿದರು.

              ಇದೇ ವೇಳೆ ಭಾರತದಲ್ಲಿ ಪ್ರಥಮ ಬಾರಿಗೆ ಕೇರಳದಲ್ಲಿ ಮಂಗನ ಕಾಯಿಲೆ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಕೇಂದ್ರದ ನಾಲ್ವರು ಸದಸ್ಯರ ತಂಡ ರಾಜ್ಯಕ್ಕೆ ಆಗಮಿಸಲಿದೆ ಎಂದು ತಿಳಿಸಲಾಗಿದೆ. ರಾಜ್ಯ ಸರ್ಕಾರದ ಚಟುವಟಿಕೆಗಳಿಗೆ ಕೇಂದ್ರ ತಂಡ ಬೆಂಬಲ ನೀಡಲಿದೆ. ಆರೋಗ್ಯ ಸಚಿವಾಲಯದ ಸಲಹೆಗಾರ ಡಾ. ಪಿ.ರವೀಂದ್ರನ್ ನೇತೃತ್ವದ ತಂಡ ಕೇರಳಕ್ಕೆ ಬರಲಿದೆ. ಡಾ. ಸಂಕೇತ್ ಕುಲಕರ್ಣಿ, ಡಾ. ಅರವಿಂದಕುಮಾರ್, ಡಾ. ಅಖಿಲೇಶ್ ಟೋಕ್ ಕೂಡ ತಂಡದಲ್ಲಿದ್ದಾರೆ.

             ಮಂಕಿಪಾಕ್ಸ್ ಎಂದು ಕರೆಯಲ್ಪಡುವ ರೋಗವು ಚಿಕನ್ ಪಾಕ್ಸ್ ನಂತೆಯೇ ಸಾಂಕ್ರಾಮಿಕ ರೋಗವಾಗಿದೆ. ಮಂಕಿಪಾಕ್ಸ್ ಪೀಡಿತರು ಸಾಮಾನ್ಯವಾಗಿ ಚಿಕನ್ ಪಾಕ್ಸ್ ಮತ್ತು ಸಿಡುಬುಗಳ ಲಕ್ಷಣಗಳನ್ನು ಹೊಂದಿರುತ್ತಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries