ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವರಾಗಿ ಡಾ.ಎಂ.ಮುರಳೀಧರನ್ ನಂಬಿಯಾರ್ ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಭಾರಿ ರಿಜಿಸ್ಟ್ರಾರ್ ಡಾ.ರಾಜೇಂದ್ರ ಪಿಲಂಗಟ್ಟೆ ಅವರಿಂದ ಅಧಿಕಾರ ಬುಧವಾರ ಸ್ವೀಕರಿಸಿದರು. ನೀಲೇಶ್ವರ ನಿವಾಸಿಯಾಗಿರುವ ಕೇರಳ ವಿಶ್ವವಿದ್ಯಾನಿಲಯದಿಂದ ಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಪಿಎಚ್.ಡಿಯನ್ನೂ ಪೂರೈಸಿದ್ದಾರೆ.
1986ರಲ್ಲಿ ಪಟನ್ನಕ್ಕಾಡ್‍ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಇತಿಹಾಸ ಶಿಕ್ಷಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರು. ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಂಡಳಿಯ ಸದಸ್ಯ ಹಾಗೂ ಪರೀಕ್ಷಾ ಮಂಡಳಿಯ ಅಧ್ಯಕ್ಷರಾಗಿದ್ದರು. ಅವರು ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರು. ಪೆÇ್ರ ಉಪ ಕುಲಪತಿ, ರಿಜಿಸ್ಟ್ರಾರ್ ಮತ್ತು ಹಣಕಾಸು ಅಧಿಕಾರಿಯ ಮಧ್ಯಂತರ ಕರ್ತವ್ಯಗಳನ್ನು ನಿರ್ವಹಿಸಿದ್ದರು. ಪತ್ನಿ ಡಾ.ಪಿ.ಕೆ. ಮಿನಿ ಅವರು ಪಡನ್ನಕ್ಕಾಡ್‍ನ ಕೃಷಿ ಕಾಲೇಜಿನ ಡೀನ್ ಆಗಿದ್ದಾರೆ.