ಸಾಹಿತ್ಯ ಪ್ರೀತಿ ಯುವ ಜನಾಂಗದ ಸಂಸ್ಕøತಿಯಾಗಿ ಬರಬೇಕು : ರಾಧಾಕೃಷ್ಣ ಕೆ. ಉಳಿಯತ್ತಡ್ಕ: ನನ್ನವರಾರಿಲ್ಲಿ ಕೃತಿ ಬಿಡುಗಡೆಗೊಳಿಸಿ ಅಭಿಮತ
0
ಜುಲೈ 26, 2022
ಬದಿಯಡ್ಕ: ಸಾಹಿತ್ಯ ಪ್ರೀತಿ ಯುವ ಜನಾಂಗದ ಸಂಸ್ಕೃತಿಯಾಗಿ ಬರಬೇಕು. ಅ ಮೂಲಕ ಸಮಾಜದ ಅಭಿವೃದ್ಧಿಯಾಗಬೇಕು ಎಂದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅಭಿಪ್ರಾಯಪಟ್ಟರು.
ಅವರು ಬದಿಯಡ್ಕದ ಸಂಸ್ಕೃತಿ ಭವನದಲ್ಲಿ ಭಾನುವಾರ ನಡೆದ ಉಡುಪಿಯ ಆರ್ಯ ಪ್ರಕಾಶನ ಪ್ರಕಟಿಸಿದ ಸ್ವಾತಿ ಕೆ. ಅವರ ಚೊಚ್ಚಲ ಕಾದಂಬರಿ “ನನ್ನವರಾರಿಲ್ಲಿ” ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ದಿನದಿಂದ ದಿನಕ್ಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿ ಬರುತ್ತದೆ. ಉತ್ತಮ ಪುಸ್ತಕ ಪ್ರಕಟವಾದರೆ ಹಾಗೂ ಪ್ರಚಾರ ಗಿಟ್ಟಿಸಿದರೆ ಓದುಗರ ವಲಯ ವಿಸ್ತಾರವಾಗುತ್ತದೆ. ಸಮಕಾಲೀನ ಸ್ಥಿತಿಗತಿಗೆ ಸ್ಪಂದಿಸುವ ಕೃತಿಗಳು ಸಾರ್ವಕಾಲಿಕ ಮೌಲ್ಯ ಪಡೆದುಕೊಂಡು ಸ್ವಚ್ಛ ಮತ್ತು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಬೇಕು. ಹೆಣ್ಣೊಬ್ಬಳ ಅಂತರಿಕ ತುಮುಲ, ತವಕ, ತಲ್ಲಣಗಳು, ಆಸೆ, ನಿರಾಶೆ, ಛಲ ಮತ್ತು ಜೀವನೋತ್ಸಾಹವನ್ನು ಅಭಿವ್ಯಕ್ತಿಸುವ “ನನ್ನವರಾರಿಲ್ಲಿ” ಕೃತಿ ಕನ್ನಡ ಸಾಹಿತ್ಯ ಲೋಕಕ್ಕೆ ಕಾಸರಗೋಡಿನ ವಿಶೇಷ ಕೊಡುಗೆಯಾಗಿ ಸಲ್ಲುತ್ತದೆ ಎಂದು ರಾಧಾಕೃಷ್ಣ ಉಳಿಯತ್ತಡ್ಕ ಹೇಳಿದರು.
ಕತೆಗಾರ್ತಿ ಸ್ನೇಹಲತಾ ದಿವಾಕರ್ ಅವರು ಕೃತಿ ಪರಿಚಯ ಮಾಡಿದರು.ಕಾದಂಬರಿಗಾರ್ತಿ ಬೆಂಗಳೂರಿನ ದಿವ್ಯ ಶ್ರೀಧರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸಾಹಿತಿ ಉಪನ್ಯಾಸಕ ಬಾಲಕೃಷ್ಣ ಬೇರಿಕೆ, ಸಂಘಟಕ ಸಾಹಿತಿ ಸುಂದರ ಬಾರಡ್ಕ ಶುಭ ಹಾರೈಸಿದರು. ಸ್ವಾತಿ ಕೆ. ಅವರು ಕೃತಿ ರಚನೆಯ ಹಿಂದಿರುವ ಅನುಭವಗಳನ್ನು ಪ್ರಸ್ತುತ ಪಡಿಸಿದರು.ವಿವಿಧ ಕ್ಷೇತ್ರಗಳ ಸಾಧಕರಾದ ನರಸಿಂಹ ಭಟ್ ಏತಡ್ಕ, ಸುಭಾμï ಪೆರ್ಲ,ನಿರ್ಮಲಾ ಶೇಷಪ್ಪ ಖಂಡಿಗೆ, ವನಜಾಕ್ಷಿ ಚೆಂಬ್ರಕಾನ, ರಾಮ ಪಟ್ಟಾಜೆ, ಕೃಷ್ಣ ಡಿ.ದರ್ಬೆತ್ತಡ್ಕ, ರಂಜಿತಾ ಪಟ್ಟಾಜೆ, ಜಯಲಕ್ಷ್ಮಿ ಕೂಡ್ಲು, ಸ್ವಾತಿ ಅವರ ಬಂಧು ಮಿತ್ರರು,ಅಭಿಮಾನಿಗಳು ಪಾಲ್ಗೊಂಡಿದ್ದರು. ನ್ಯಾಯವಾದಿ ಗಣೇಶ್ ಬದಿಯಡ್ಕ ಸ್ವಾಗತಿಸಿ, ದಿನೇಶ್ ಕೆಡೆಂಜಿ ಕಾರ್ಯಕ್ರಮ ನಿರೂಪಿಸಿದರು.