ಬದಿಯಡ್ಕ: ನೀರ್ಚಾಲು ಸಮೀಪದ ಕಜಳ ನಿವಾಸಿ ಶಿವರಾಮ ಭಟ್(66) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನ ಹೊಂದಿದರು. ಪ್ರಸಿದ್ದ ಸಂಸ್ಥೆ ಹಿಂದೂಸ್ಥಾನ್ ಮೆಶಿನ್-ಟೂಲ್ಸ್(ಎಚ್.ಎಂ.ಟಿ)ಯಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು ದೇಶದ ವಿವಿಧೆಡೆ ಕಾರ್ಯನಿರ್ವಹಿಸಿದ್ದರು. ಪೆರಡಾಲ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕರಾಗಿದ್ದರು. ವೃತ್ತಿ ನಿವೃತ್ತಿಯ ಬಳಿಕ ಸ್ವಗ್ರಾಮದಲ್ಲಿ ಕೃಷಿ ನಿರತರಾಗಿ, ಸಾಮಾಜಿಕ ಚಟುವಟಿಕೆಗಳ ಮೂಲಕ ಜನಾನುರಾಗಿಯಾಗಿದ್ದರು. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.