ಕಾಸರಗೋಡು: ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಪಶು ರೋಗ ನಿಯಂತ್ರಣ ಯೋಜನೆಯನ್ವಯ ಹಂದಿ ಸಾಕಾಣಿಕೆಯಲ್ಲಿ ತೊಡಗಿರುವ ರೈತರಿಗೆ ಆಫ್ರಿಕನ್ ಹಂದಿಜ್ವರ ಜಾಗೃತಿ ತರಗತಿ ನಡೆಸಲಾಯಿತು.
ವಯನಾಡು ಜಿಲ್ಲೆಯಲ್ಲಿ ರೋಗ ದೃಢಪಟ್ಟ ನಂತರ ಕಾಸರಗೋಡು ಜಿಲ್ಲೆಗೆ ರೋಗ ಹರಡುವುದನ್ನು ತಡೆಗಟ್ಟಲು ರೈತರು ಕೈಗೊಳ್ಳಬೇಕಾದ ಜೈವಿಕ ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸವ ನಿಟ್ಟಿನಲ್ಲಿ ತರಬೇತಿ ಆಯೋಜಿಸಲಾಗಿತ್ತು.
ಜಿಲ್ಲಾ ಪಶು ಸಂರಕ್ಷಣಾ ಕಚೇರಿಯ ಉಪನಿರ್ದೇಶಕ ಡಾ. ಜಿ.ಎಂ.ಸುನೀಲ್ ಅವರು ಜಿಲ್ಲೆಯಲ್ಲಿ ಪಶು ಕಲ್ಯಾಣ ಇಲಾಖೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಸಂಯೋಜಕ ಡಾ. ಎಸ್.ಮಂಜು ಅವರು ಪ್ರಸ್ತುತ ಕೇರಳದಲ್ಲಿ ಆಫ್ರಿಕನ್ ಹಂದಿ ಜ್ವರದ ಸಾಂಕ್ರಾಮಿಕ ರೋಗದ ಸಮಗ್ರ ಮಾಹಿತಿ ಪ್ರಸ್ತುತಪಡಿಸಿದರು. ಬದಿಯಡ್ಕ ಮೃಗಾಸ್ಪತ್ರೆ ವೈದ್ಯಾಧಿಕಾರಿ ಡಾ. ಇ.ಚಂದ್ರಬಾಬು ಸಮನ್ವಯಕಾರಾಗಿ ಭಾಗವಹಿಸಿದ್ದರು. ಡಾ. ಮುಹಮ್ಮದ್ ಆಸಿಫ್ ಉಪಸ್ಥಿತರಿದ್ದರು.
ಆಫ್ರಿಕನ್ ಹಂದಿ ಜ್ವರ: ಜಿಲ್ಲಾ ಪಶುಸಂಗೋಪನಾ ಇಲಾಖೆಯಿಂದ ಜಾಗೃತಿ ತರಗತಿ
0
ಜುಲೈ 31, 2022