ಮಂಜೇಶ್ವರ: ಕುಂಜತ್ತೂರು ಸರ್ಕಾರಿ ವಒಕೇಶನಲ್ ಹೈಯರ್ ಸೆಕೆಂಡರಿ ಶಾಳೆಯ ವಿಜ್ಞಾನ ಶಿಕ್ಷಕಿಯಾಗಿ ಸೇವೆಸಲ್ಲಿಸಿ, ಇಡುಕ್ಕಿಯ ಮನ್ನಂಕಂಡಂ ಸರ್ಕಾರಿ ಪ್ರೌಢಶಾಲೆಯ
ಮುಖ್ಯೋಪಾಧ್ಯಾಯಿನಿಯಾಗಿ ಪದೋನ್ನತಿಗೊಂಡ ಲಲಿತಾ ಟೀಚರ್ ಅವರಿಗೆ ಶಾಲೆಯ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಶಾಲಾ ಮುಖ್ಯ ಶಿಕ್ಷಕ ಬಾಲಕೃಷ್ಣ. ಜಿ.ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಲಲಿತಾ ಟೀಚರನ್ನು ಸನ್ಮಾನಿಸಲಾಯಿತು. ಹಿರಿಯ ಶಿಕ್ಷಕಿ ಸುಚೇತಾ ಟೀಚರ್ ಉಪಸ್ಥಿತರಿದ್ದರು. ಶಿಕ್ಷಕ ದಿವಾಕರ ಬಲ್ಲಾಲ್ ಪ್ರಾರ್ಥನೆ ಸಲ್ಲಿಸಿದರು. ಸ್ಟಾಫ್ ಸೆಕ್ರೆಟರಿ ಅಮಿತಾ ಟೀಚರ್ ಸ್ವಾಗತಿಸಿ. ಶಿಕ್ಷಕ ಅಶ್ರಫ್ ನಿರೂಪಿಸಿದರು. ಕವಿತಾ ಟೀಚರ್ ವಂದಿಸಿದರು.