ಇಷ್ಟರವರೆಗೆ ಸೈಲೆಂಟ್ ಆಗಿದ್ದ ಕೊರೊನಾ ಇದೀಗ ಮತ್ತೆ ತನ್ನ ಬಾಲ ಬಿಚ್ಚಲು ಆರಂಭಿಸಿದೆ. ಜಗತ್ತಿನಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದೆ. ದೈನಂದಿನ ಕೊರೊನಾ ಕೇಸ್ ನ ಅಂಕೆ-ಸಂಖ್ಯೆಗಳು ಏರಿಕೆಯಾಗುತ್ತಿದೆ. ಹೀಗಾಗಿ ಸಾಮಾನ್ಯವಾಗಿ ಜನರಲ್ಲಿ ಕೊರೊನಾ ಸೋಂಕಿನ ಭಯ ಮತ್ತೆ ಮೂಡುತ್ತಿದೆ. ಹಾಗಾದರೆ ಕೊರೊನಾ ಬಂದಿದೆ ಎಂದು ನೀವು ಪತ್ತೆ ಹಚ್ಚಬಹುದಾ? ಕೋವಿಡ್ ಟೆಸ್ಟ್ ಮಾಡಿಸದೆ ನಮಗೆ ಕೊರೊನಾ ಬಂದಿದ್ಯಾ ಎಂಬುವುದು ಗೊತ್ತಾಗುವುದು ಹೇಗೆ? ಅದಕ್ಕೊಂದು ಉಪಾಯವಿದೆ.
ಹೌದು, ಕೊರೊನಾ ಸೋಂಕು ಮೊದಲು ನಮ್ಮ ದೇಹವನ್ನು ಪ್ರವೇಶಿಸಿ ಸಮಸ್ಯೆ ಉಂಟು ಮಾಡುವುದು ನಮ್ಮ ಗಂಟಲಿಗೆ. ಕೊರೊನಾ ಸೋಂಕು ವೈರಸ್ ನಮ್ಮ ದೇಹದಲ್ಲಿದೆ ಎನ್ನುವುದನ್ನು ತೀವ್ರ ತರದ ಗಂಟಲು ನೋವಿನಿಂದ ನಮಗೆ ತಿಳಿಯುತ್ತದೆ.
ಹಾಗಾದರೆ, ಕೊರೊನಾ ಸಂಬಂಧ ಉಂಟಾಗುವ ಗಂಟಲು ನೋವು ಹೇಗಿರುತ್ತದೆ? ಅದರ ಲಕ್ಷಣವೇನು? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಕೋವಿಡ್ ನಿಂದ ಗಂಟಲು ನೋವು! ವೈದ್ಯರುಗಳ ಪ್ರಕಾರ ಕೊರೊನಾ ಹಾಗೂ ಸಾಮಾನ್ಯವಾಗಿ(ಅಂದರೆ ಜ್ವರ, ನೆಗಡಿಯಿಂದ) ಉಂಟಾಗುವ ಗಂಟಲು ನೋವಿನಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದಿದ್ದಾರೆ. ಇದು ಒಂದೇ ರೀತಿಯ ಅನುಭವ ಉಂಟು ಮಾಡುತ್ತದೆ ಎಂದಿದ್ದಾರೆ. ಆದರೂ ಕೊರೊನಾದ ಗಂಟಲು ನೋವಿನ ರೋಗ ಲಕ್ಷಣಗಳು ಕೊಂಚ ವಿಭಿನ್ನ ರೀತಿಯಲ್ಲಿ ಇರುತ್ತದೆಯಂತೆ. ಉದಾಹರಣೆಗೆ ಕೊರೊನಾ ವೈರಸ್ ನಿಂದ ಗಂಟಲು ನೋವು ಅಥವಾ ಕಿರಿಕಿರಿ ಉಂಟಾದಾಗ ಒಂದು ಬಗೆಯ ಸುಡುವ ಸಂವೇದನೆ ಆಗುವುದು. ಗಂಟಲು ಒರಟಾಗುವುದು, ಧ್ವನಿಯಲ್ಲಿ ಬದಲಾವಣೆ, ಆಹಾರ ಸೇವನೆಮಾಡಲು ಕಷ್ಟವಾಗುವುದು ಮತ್ತು ತೀವ್ರವಾದ ನೋವು ಕಾಣಿಸಿಕೊಳ್ಳುವುದು. ಹೀಗೆ ಈ ರೀತಿಯ ಲಕ್ಷಣಗಳು ಕೊರೊನಾ ಸೋಂಕಿನಿಂದ ಉಂಟಾಗಬಹುದಂತೆ. ಆದರೂ ಈ ಬಗ್ಗೆ ಭಯ ಬೇಡ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ತೆಗೆದುಕೊಂಡರೆ ಸಾಕು. ಇನ್ನು ಕೊರೊನಾದಿಂದ ಉಂಟಾಗುವ ಹಾಗೂ ಸಾಮಾನ್ಯವಾಗಿ ಉಂಟಾಗುವ ಗಂಟಲು ನೋವಿನಲ್ಲಿ ಭಾರೀ ವ್ಯತ್ಯಾಸವಿಲ್ಲ. ಎರಡು ರೀತಿಯ ಗಂಟಲು ನೋವಿನಲ್ಲಿ ಮನುಷ್ಯ ಉಸಿರಾಟದ ತೊಂದರೆ ಅನುಭವಿಸುತ್ತಾನೆ. ಆದರೆ ಕೊರೊನಾದಲ್ಲಿ ಉಸಿರಾಟದ ತೊಂದರೆ ಕೊಂಚ ಜಾಸ್ತಿಯಾಗಿ ಇರುತ್ತದೆ. ಇನ್ನು ಕೊರೊನಾದಿಂದ ಗಂಟಲಿನ ಮೇಲ್ಮೈ ಹಾಗೂ ಕೆಳ ಭಾಗದಲ್ಲೂ ಗಂಟಲು ನೋವಿನ ಅನುಭವ ಆಗುತ್ತದೆ. ಅಲ್ಲದೇ ಈ ಮೂಲಕ ಹಲವು ರೋಗ ಅಂದರೆ ತೀವ್ರ ಜ್ವರ, ನೆಗಡಿ, ಕೆಮ್ಮಿನಂತಹ ಕಾಯಿಲೆ ಬರಬಹುದು.
ಅಧ್ಯಯನ ಏನು ಹೇಳುತ್ತದೆ? ತಜ್ಞರ ಪ್ರಕಾರ ಕೊರೊನಾದಿಂದ ಗಂಟಲು ನೋವು ಸಾಮಾನ್ಯವಾಗಿ ಅನಾರೋಗ್ಯದ ಮೊದಲ ವಾರದಲ್ಲಿ ಕಾಣಿಸಿಕೊಳ್ಳುತ್ತದೆ ಎನ್ನಲಾಗಿದೆ. ಇನ್ನು ಕೊರೊನಾದಿಂದ ಆರಂಭವಾಗುವ ಗಂಟಲು ನೋವಿನ ಮೊದಲ ದಿನ ತೀವ್ರ ತರದ ನೋವು ಇರುತ್ತದೆ. ಮತ್ತು ಅದು ಮುಂದಿನ ಪ್ರತಿ ದಿನವೂ ಈ ನೋವು ನಿಧಾನವಾಗಿ ಸುಧಾರಿಸುತ್ತ ಹೋಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.
ಹೇಗೆ ಕಂಡು ಹಿಡಿಯುವುದು? ಕೋವಿಡ್19 ರೋಗನಿರ್ಣಯ ಪರೀಕ್ಷೆಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ನೀವು ಶೀತ ಅಥವಾ ಕೋವಿರ್‌ಗೆ ಸಂಬಂಧಿಸಿದ ಇತರ ಯಾವುದೇ ರೋಗಲಕ್ಷಣಗಳನ್ನು ಹೊಂದಿದ್ದರೆ ತಕ್ಷಣವೇ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಮಾಡಿಕೊಳ್ಳುವುದು ಉತ್ತಮ ಮಾರ್ಗ. ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದರಿಂದ ಗಂಟಲು ನೋವಿಗೆ ನಿಖರವಾದ ಕಾರಣವೇನೆಂದು ತಿಳಿದುಬರುತ್ತದೆ. ಅದರ ಬದಲು ಇದು ಹವಾಮಾನ ಬದಲಾವಣೆಯಿಂದಾದ ಗಂಟಲುನೋವೆಂದು ನಿರ್ಲಕ್ಷಿಸುವುದು ಸೂಕ್ತವಲ್ಲ
ಗಂಟಲು ನೋವಿಗೆ ಏನು ಮಾಡಬಹುದು! ಸಾಮಾನ್ಯವಾಗಿ ಅಥವಾ ಕೋವಿಡ್ ನಿಂದ ಗಂಟಲು ನೋವು ಸಂಭವಿಸಿದರೆ ತಂಪಾದ ಆಹಾರಗಳನ್ನು ಸೇವಿಸುವುದು ತಕ್ಷಣ ಬಿಟ್ಟುಬಿಡಿ. ಹಣ್ಣುಗಳನ್ನು ತಿನ್ನಬೇಡಿ. ಇನ್ನು ಗಂಟಲು ನೋಬು ಬಂದರೆ ಅದರ ನಿವಾರಣೆಗೆ ಬಿಸಿ ಬಿಸಿ ಶುಂಠಿ ಚಹಾ ಕುಡಿದರೆ ಉತ್ತಮ. ಇನ್ನು ಶುಂಠಿ, ಕರಿಮೆಣಸು ಹಾಕಿದ ಕಷಾಯ ಕುಡಿಯಬಹುದು. ಬಿಸಿ ನೀರು ಕುಡಿಯುತ್ತಿದ್ದರೆ ಗಂಟಲು ನೋವು ಕಡಿಮೆ ಆಗುತ್ತದೆ. ಇನ್ನು ಬಿಸಿ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿದರೆ ಗಂಟಲು ನೋವು ಮಂಗಮಾಯವಾಗುತ್ತದೆ. ಇನ್ನು ಆಯುರ್ವೇದ ವೈದ್ಯರ ಪ್ರಕಾರ ನೋವು ಇರುವ ಗಂಟಲಿನ ಭಾಗಕ್ಕೆ ಅರಶಿನ ಪುಡಿ ಹಾಕಿದರೆ ಬಲು ಉತ್ತಮವಂತೆ.