ಕಾಸರಗೋಡು: ಜಿಲ್ಲಾ ಚುಟುಕು ಸಾಹಿತ್ಯ ಪರಿಚತ್ ಆಶ್ರಯದಲ್ಲಿ ಕಾಸರಗೋಡು ಕರಾವಳಿ ಸಾಂಸ್ಕøತಿಕ ಪ್ರತಿಷ್ಠಾನ ಹಾಗೂ ಕನ್ನಡಗ್ರಾಮ ವತಿಯಿಂದ ನಡೆಯಲಿರುವ ಕಾಸರಗೋಡು ಜಿಲ್ಲಾ ಆರನೇ ಚುಟುಕು ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಖ್ಯಾತ ವ್ಯಂಗ್ಯಚಿತ್ರಕಾರ, ಸಾಹಿತಿ ವೆಂಕಟ ಭಟ್ ಎಡನೀರು ಅವರನ್ನು ಆಯ್ಕೆ ಮಾಡಲಾಗಿದೆ.
ಕಾಸರಗೋಡು ಕನ್ನಡಗ್ರಾಮದಲ್ಲಿ ಸೆಪ್ಟಂಬರ್ 11ರಂದು ಚುಟುಕು ಸಾಹಿತ್ಯ ಸಮ್ಮೇಳನ ನಡೆಯಲಿರುವುದಾಗಿ ಪ್ರತಿಷ್ಠಾನ ಅಧ್ಯಕ್ಷ ಶಿವರಾಂ ಕಾಸರಗೋಡು, ಕರ್ನಾಟಕ ಪರಿಷತ್ ಕಾಸರಗೋಡು ಇದರ ಅಧ್ಯಕ್ಷ ಎಸ್.ಎಲ್ ಭಾರದ್ವಾಜ್ ಬೇಕಲ್, ಶ್ರೀರಾಮನಾಥ ಭವನ ಸಮಿತಿ ಸಂಚಾಲಕ ಗುರುಪ್ರಸಾದ್ ಕೋಟೆಕಣಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.