ಕಾಸರಗೋಡು: ಹೆಚ್ಚುತ್ತಿರುವ ಘರ್ಷಣೆ ಮತ್ತು ಮಾದಕ ವಸ್ತುಗಳ ವ್ಯಾಪಾರ ಕಾಸರಗೋಡು ಜಿಲ್ಲೆಯಲ್ಲಿ ಭಯೋತ್ಪಾದಕ ವಾತಾವರಣವನ್ನು ಸೃಷ್ಟಿಸುತ್ತಿದೆ. ಇದರಿಂದ ನೆಮ್ಮದಿಯ ಜೀವನ ಬಯಸುವ ಜನರು ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕಾಸರಗೋಡಿನ ಶಾಸಕರು ಮುಖ್ಯ ಮಂತ್ರಿಯನ್ನು ಒತ್ತಾಯಿಸಿದ್ದಾರೆ.
ಭೂಗತ ಪಾತಕಿಗಳ ಅಮಾನವೀಯ ಮತ್ತು ಕ್ರೂರ ಅಪರಾಧಿ ಕೃತ್ಯಗಳನ್ನು ನೆನಪಿಸುವ ರೀತಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೊಲೆ, ಸುಲಿಗೆ ಸಹಿತ ಸಮಾಜಬಾಹಿರ ಕೃತ್ಯಗಳು ನಡೆಯುತ್ತಿದೆ. ಕೊಟೇಶನ್ ಗ್ಯಾಂಗ್‍ಗಳನ್ನು ಹತ್ತಿಕ್ಕಲು ಮತ್ತು ಮಾದಕ ದ್ರವ್ಯ ದಂಧೆ ಮತ್ತು ಬಳಕೆಯನ್ನು ತೊಡೆದುಹಾಕಲು ಜಿಲ್ಲೆಯಲ್ಲಿ ವಿಶೇಷ ಪೆÇಲೀಸ್ ವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿರುವುದಾಗಿ ಶಾಸಕರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಾಞಂಗಾಡು ಶಾಸಕ ಇ.ಚಂದ್ರಶೇಖರನ್, ಎನ್.ಎ.ನೆಲ್ಲಿಕುನ್ನು ಕಾಸರಗೋಡು, ಸಿ.ಎಚ್.ಕುಞಂಬು ಉದುಮ, ಎಂ.ರಾಜಗೋಪಾಲನ್ ತೃಕ್ಕರಿಪುರ ಮತ್ತು ಎ.ಕೆ.ಎಂ.ಅಶ್ರಫ್ ಮಂಜೇಶ್ವರ ಅವರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಕಾಸರಗೋಡಿನ ಸಾಮಾಜಿಕ ಜೀವನದ ಮೇಲೆ ಪರಿಣಾಮ ಬೀರುತ್ತಿರುವ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟಿದ್ದರು.