ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಿರುವುದನ್ನು ಸ್ವಪ್ನಾ ಸುರೇಶ್ ಸ್ವಾಗತಿಸಿದ್ದಾರೆ. ಕೇರಳದಲ್ಲಿ ತನಿಖೆ ನಡೆಸಿದರೆ ಅದು ಸಾಬೀತಾಗುವುದಿಲ್ಲ ಎಂಬ ಆತಂಕವಿತ್ತು. ಇಡಿಯ ಬಗ್ಗೆ ಈಗ ನಂಬಿಕೆ ಬರುತ್ತಿದೆ. ಹೊಸ ನಡೆ ಭರವಸೆ ಮೂಡಿಸಿದೆ ಎಂದು ಸ್ವಪ್ನಾ ಪ್ರತಿಕ್ರಿಯಿಸಿದ್ದಾರೆ.
ಶಿವಶಂಕರ್ ಅವರು ಮೊದಲೇ ತಿಳಿಸಿದ್ದರು. ಇಡಿ ಮತ್ತು ಎನ್ ಐ ಎಯಂತಹ ರಾಷ್ಟ್ರೀಯ ತನಿಖಾ ಸಂಸ್ಥೆಗಳಿಗೆ ಹೆದರಬೇಡಿ. ಏಕೆಂದರೆ ಕೇರಳದಲ್ಲಿ ಎನ್ ಐಎ ತೆಗೆದುಕೊಂಡಿರುವ ಪ್ರಕರಣವನ್ನು ಕೇರಳ ಪೊಲೀಸ್ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಅವರು ಮುಖ್ಯಮಂತ್ರಿಗಳ ತಂಡದಲ್ಲಿರುವವರು. ಹಾಗಾಗಿ ಕೇರಳದಲ್ಲಿ ಪ್ರಕರಣದ ನಿರ್ವಹಣೆಯ ಮೇಲೆ ರಾಜ್ಯ ಸರ್ಕಾರ ಪ್ರಭಾವ ಬೀರಬಹುದು ಎಂದು ಭಾವಿಸುವುದಾಗಿ ಸ್ವಪಪ್ನಾ ಹೇಳಿದ್ದು, ಈ ಸಂದರ್ಭದಲ್ಲಿ ಪ್ರಕರಣವನ್ನು ಕರ್ನಾಟಕಕ್ಕೆ ವರ್ಗಾಯಿಸಿರುವ ಇಡಿ ಕ್ರಮ ಸ್ವಾಗತಾರ್ಹ.
ಕೆ.ಟಿ.ಜಲೀಲ್ ವಿರುದ್ಧದ ಸಾಕ್ಷ್ಯವನ್ನು ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸ್ವಪ್ನಾ ತಿಳಿಸಿದ್ದಾರೆ. ಕೆ.ಟಿ.ಜಲೀಲ್ ಅವರು ಸಚಿವರಾಗಿದ್ದಾಗ ದೇಶವಿರೋಧಿ ಚಟುವಟಿಕೆ ಮಾಡಿದ್ದಕ್ಕೆ ಸಾಕ್ಷಿ ಇದೆ. ಅದನ್ನು ವಕೀಲರಿಗೆ ಹಸ್ತಾಂತರಿಸಲಾಗಿದೆ. ಅಫಿಡವಿಟ್ ಸಮೇತ ನಾಳೆ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಸ್ವಪ್ನಾ ತಿಳಿಸಿದ್ದಾರೆ. ನಾಳೆ ಸಾಕ್ಷ್ಯಾಧಾರ ಸಲ್ಲಿಕೆಯಿಂದ ತಮ್ಮ ವಿರುದ್ಧದ ಷಡ್ಯಂತ್ರ ಪ್ರಕರಣದ ನೈಜತೆ ಹೊರಬೀಳಲಿದ್ದು, ಷಡ್ಯಂತ್ರ ರೂಪಿಸಿದ್ದು ಯಾರು ಎಂಬುದು ಸಾಬೀತಾಗಲಿದೆ ಎಂದು ಸ್ವಪ್ನಾ ಸುರೇಶ್ ಹೇಳಿದ್ದಾರೆ.