ತಿರುವನಂತಪುರ:ಚಂದು ಮೆನನ್ ಅವರ ಕಾದಂಬರಿ ಆಧರಿಸಿ ಕಲಾಮಂಡಲಂ ಕೃಷ್ಣ ನಾಯರ್ ನಿರ್ದೇಶಿಸಿದ ಪ್ರಖ್ಯಾತವಾದ ಅದೇ ಹೆಸರಿನ ಚಲನಚಿತ್ರದ ಪ್ರಮುಖ ನಟ ರಾಜಮೋಹನ್ ಭಾನುವಾರ ನಿಧನರಾಗಿದ್ದರು. ಜೀವನದ ಕೊನೆಯ ವೇಳೆ ಹಿಂದುಮುಂದಿಲ್ಲದೆ ಅನಾಥಾಶ್ರಮದಲ್ಲಿ ಜೀವನ ಸಾಗಿಸಿದ್ದ ಅವರ ಮೃತದೇಹ ಇದೀಗ ವಾರೀಸುದಾರರಿಲ್ಲದೆ ಆಸ್ಪತ್ರೆಯ ಶವಾಗಾರದಲ್ಲಿ ಅನಾಥವಾಗಿದೆ.
ಮೃತದೇಹ ಸ್ವಾಧೀನಪಡಿಸಿಕೊಳ್ಳಲು ಯಾರೂ ಇಲ್ಲದೆ ದಿನಗಟ್ಟಲೆ ಶವಾಗಾರದಲ್ಲಿ ಇರುವ ನಟ ರಾಜಮೋಹನ್ ಅವರ ಪಾರ್ಥಿವ ಶರೀರವನ್ನು ಚಲನಚಿತ್ರ ಅಕಾಡೆಮಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ‘ಇಂದುಲೇಖ’ ಚಿತ್ರದ ನಾಯಕ ರಾಜಮೋಹನ್ ಶವವನ್ನು ಶವಾಗಾರದಲ್ಲಿ ಕಳೆದ ಎರಡು ದಿನಗಳಿಂದ ಅನಾಥವಾಗಿದೆ. ಸಂಬಂಧಿಕರಿಗಾಗಿ ಹುಡುಕಾಟ ನಡೆಸಿದ್ದರೂ ಪತ್ತೆಯಾಗಿಲ್ಲ. ಕೊನೆಗೂ ಚಿತ್ರ ಅಕಾಡೆಮಿ ಪಾರ್ಥಿವ ಶರೀರವನ್ನು ಸ್ವಾಧೀನ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ.
ರಾಜ್ ಮೋಹನ್ ಅವರು ಕಲಾನಿಲಯಂ ಕೃಷ್ಣನ್ ನಾಯರ್ ಅವರ ಅಳಿಯ ಕೂಡ ಆಗಿದ್ದರು. ವಿವಾಹ ವಿಚ್ಚೇದನಗೊಂಡು ರಾಜಮೋಹನ್ ಅವರ ಕೊನೆಯ ದಿನಗಳು ಸಂಕಟದಿಂದ ಕೂಡಿದ್ದವು. ನಂತರ ಅವರನ್ನು ಅನಾಥಾಶ್ರಮಕ್ಕೆ ಸೇರಿಸಲಾಯಿತು. ಅಲ್ಲಿ ನಾಲ್ಕು ಹೋಡೆಗಳ ಮಧ್ಯೆ ಕಳೆದ ದಿನಗಳ ಮೆಲು ನೆನಪಿನಲ್ಲಿ ಸಂಕಟಭರಿತರಾಗಿದ ಅವರು ಅಸ್ವಸ್ಥತೆ ಕಾರಣ ಕೆಲವು ದಿನಗಳ ಹಿಂದೆ ತಿರುವನಂತಪುರ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಭಾನುವಾರ ಅವರು ಕೊನೆಯುಸಿರೆಳೆದರು. ಇಂದು ಚಲನಚಿತ್ರ ಅಕಾಡೆಮಿ ಪಾರ್ಥಿವ ಶರೀರವನ್ನು ಸ್ವಾಧೀನಪಡಿಸಿಕೊಳ್ಳಲಿದೆ. ಬೆಳಗ್ಗೆ 11 ಗಂಟೆಗೆ ತಿರುವನಂತಪುರಂನ ಭಾರತ್ ಭವನದಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.