ಬದಿಯಡ್ಕ: ಎಡನೀರು ಶ್ರೀಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಎರಡನೇ ಚಾತುರ್ಮಾಸ್ಯ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಶನಿವಾರ ಸಂಜೆ ಯಜ್ಞೇಶ ಆಚಾರ್ಯ ಸುಬ್ರಹ್ಮಣ್ಯ ಮತ್ತು ತಂಡದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಸತ್ಯನಾರಾಯಣ ಐಲ(ಹಾರ್ಮೋನಿಯಂ) ಹಾಗೂ ಲವಕುಮಾರ ಐಲ(ತಬಲಾ)ದಲ್ಲಿ ಸಹಕರಿಸಿದ್ದರು.
ಇಂದು (ಭಾನುವಾರ) ಸಂಜೆ 6 ರಿಂದ ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನ ಗುರು ವಿದುಷಿಃ ವಿದ್ಯಾ ಮನೋಜ್ ಇವರ ಶಿಷ್ಯೆಯರಾದ ವಿದುಷಿಃ ಶ್ರೀದೇವಿ ಕಲ್ಲಡ್ಕ ಹಾಗೂ ವಿದುಷಿಃ ಡಾ.ಮಹಿಮಾ ಎಂ.ಪಣಿಕ್ಕರ್ ಅವರಿಂದ ಯುಗಳ ನೃತ್ಯ ಪ್ರದರ್ಶನ ನಡೆಯಲಿದೆ.