ಮಧೂರು: ಉಳಿಯತ್ತಡ್ಕ ಶ್ರೀ ಶಕ್ತಿ ಭಜನಾ ಮಂದಿರದಲ್ಲಿ ಖ್ಯಾತ ಭಜನಾ ಗುರು, ಸಂಕೀರ್ತನಕಾರ ಹರಿದಾಸ ಜಯಾನಂದ ಕುಮಾರ ಹೊಸದುರ್ಗ ಇವರಿಗೆ ಶ್ರೀ ಮುತ್ತಪ್ಪ ಮಹಿಳಾ ಭಕ್ತವೃಂದದಿಂದ ಗುರುವಂದನಾ ಕಾರ್ಯಕ್ರಮ ಜರಗಿತು.
ಪ್ರೇಮಲತಾ ಟೀಚರ್ ಶಾಲುಹೊದಿಸಿ ಗೌರವಿಸಿದರು. ಅಧ್ಯಕ್ಷೆ ನೇತ್ರಾವತಿ ಆಚಾರ್ಯ, ಕಾರ್ಯದರ್ಶಿ ಲತಾ ಹಾಗೂ ಸದಸ್ಯರಾದ ಅನುರಾಧ, ಆಶಾ, ಸುನಂದ, ಜಯಶ್ರೀ, ರಾಜೀವಿ, ಯಶೋಧ, ಜ್ಯೋಸ್ನಾ ಹೂಗುಚ್ಚ ಹಣ್ಣುಹಂಪಲುಗಳನ್ನು ನೀಡಿ ಗುರುಗಳ ಆಶೀರ್ವಾದವನ್ನು ಪಡೆದುಕೊಂಡರು.