ಕಣ್ಣೂರು: ಪಯ್ಯನ್ನೂರಿನ ಆರ್‍ಎಸ್‍ಎಸ್ ಕಚೇರಿ ಮೇಲೆ ನಿನ್ನೆ ಬಾಂಬ್ ದಾಳಿ ನಡೆದಿದೆ. ಈ ದೃಶ್ಯಾವಳಿಗಳು ಈಗ ಹೊರಬಿದ್ದಿವೆ. ಇಂದು ಮುಂಜಾನೆ 1.38ಕ್ಕೆ ಈ ಘಟನೆ ನಡೆದಿದೆ. ಗೇಟ್ ಮುಂದೆ ವಾಹನ ನಿಲ್ಲಿಸಿ ಬಾಂಬ್ ಎಸೆಯುತ್ತಿರುವ ಸಿಸಿಟಿವಿ ದೃಶ್ಯಾವಳಿ ಬಿಡುಗಡೆಯಾಗಿದೆ. ಬಾಂಬ್ ಸ್ಫೋಟವನ್ನು ಯಾರು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಬಾಂಬ್ ಸ್ಫೋಟದ ಹಿಂದೆ ಸಿಪಿಎಂ ಕೈವಾಡವಿದೆ ಎಂದು ಪೋಲೀಸರು ಶಂಕಿಸಿದ್ದಾರೆ. ದಾಳಿಯಲ್ಲಿ ಕಚೇರಿಯ ಕಿಟಕಿ ಗಾಜುಗಳು ಒಡೆದಿವೆ. ಈ ಹಿಂದೆಯೂ ಆರ್‍ಎಸ್‍ಎಸ್ ಕಚೇರಿಗಳ ಮೇಲೆ ಇಂತಹ ದಾಳಿಗಳು ನಡೆದಿತ್ತು.
ಕೆಲ ದಿನಗಳ ಹಿಂದೆ ಪಯ್ಯನ್ನೂರಿನ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ನಡೆಸಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. ಸ್ಥಳದಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆದರೆ ಇದಾದ ನಂತರವೂ ಆರ್‍ಎಸ್‍ಎಸ್ ಕಚೇರಿ ಮೇಲೆ ಬಾಂಬ್ ದಾಳಿ ನಡೆದಿದೆ.
ಘಟನೆಯ ಕುರಿತು ಪೋಲೀಸರು ವಿವರವಾದ ತನಿಖೆ ನಡೆಸುತ್ತಿದ್ದಾರೆ. ಘಟನೆಯ ವೇಳೆ ಕಚೇರಿ ಇದ್ದ ಪ್ರದೇಶದಲ್ಲಿದ್ದ ಮೊಬೈಲ್ ಪೋನ್‍ಗಳನ್ನು ಪರಿಶೀಲಿಸಲು ಟವರ್‍ಗಳ ಡೇಟಾವನ್ನು ಸಹ ಸಂಗ್ರಹಿಸಿ ತನಿಖೆ ನಡೆಸಲಾಗುವುದು.