ಕೊಲ್ಲಂ: ಅಭಿಮಾನ ಎಂಬುದು ಕೆಲವೊಮ್ಮೆ ಎಷ್ಟು ಏಚಿಗೆ ಸಿಲುಕಿಸುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ. ರಾಷ್ಟ್ರಪ್ರಶಸ್ತಿ ಪುರಸ್ಕøತ ಸೂರ್ಯ ಅವರ ಜನ್ಮದಿನದ ಶುಭಾಶಯ ಕೋರಲು ಖಾಸಗಿ ಬಸ್ಸಿನ ಮುಂದಿನ ಗಾಜಿಗೆ ಬಲೂನ್ ಮತ್ತು ಪೋಸ್ಟರ್ ನೇತುಹಾಕಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ 10.30ಕ್ಕೆ ಕೊಲ್ಲಂ ನಗರದ ತಾಲೂಕು ಕಚೇರಿ ಜಂಕ್ಷನ್‍ನಲ್ಲಿ ಈ ಘಟನೆ ನಡೆದಿದೆ. ಸೂರ್ಯ ಅವರ ಹುಟ್ಟುಹಬ್ಬದ ಶುಭಾಷಯ ಕೋರಲು ಚಾವರ- ಕೋಟಯಂ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಗೆ ಭರ್ಜರಿ ಶೃಂಗಾರ ಮಾಡಲಾಗಿತ್ತು.
ವಾಹನದ ಮೇಲೆ ಬಲೂನ್‍ಗಳು ಮತ್ತು ಪೋಸ್ಟರ್‍ಗಳನ್ನು ಹಾಕಲಾಗಿದ್ದು, ಚಾಲಕನ ದೃಷ್ಟಿಗೆ ತೊಡಕಾಗುತ್ತಿತ್ತು. ವಾಹನದ ಎಡಭಾಗ ಸಂಪೂರ್ಣವಾಗಿ ಅಗೋಚರವಾಗಿತ್ತು. ಇದನ್ನು ಗಮನಿಸಿದ ಕೊಲ್ಲಂ ನಗರ ಟ್ರಾಫಿಕ್ ಎಸ್ ಐ ಎಂ.ಶಹಾಲುದ್ದೀನ್ ಅವರು ತಾಲೂಕು ಗೋಷ್ಠಿಯಲ್ಲಿ ಕರ್ತವ್ಯ ನಿರತ ಪೋಲೀಸ್ ತಂಡಕ್ಕೆ ನಿರ್ದೇಶನ ನೀಡಿ, ವಾಹನವನ್ನು ಅಲ್ಲಿಂದ ವಶಪಡಿಸಿಕೊಂಡಿದ್ದಾರೆ.
ನಂತರ ವಾಹನದ ಮುಂಭಾಗದ ಗಾಜಿನ ಮೇಲೆ ಅಂಟಿಸಿದ್ದ ಪೋಸ್ಟರ್ ಹಾಗೂ ಬಲೂನ್ ಗಳನ್ನು ತೆಗೆಯಲಾಯಿತು. ಅಪಾಯಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಕ್ಕೆ ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಲಾಗಿದೆ.
ಬಲೂನ್‍ಗಳು ಮತ್ತು ಪೋಸ್ಟರ್‍ಗಳನ್ನು ಕಟ್ಟುವ ಮೂಲಕ ಸೂರ್ಯನಿಗೆ ಜನ್ಮದಿನದ ಭರ್ಜರಿ ಶೃಂಗಾರಗೊಳಿಸಿದ ಬಸ್: ಪೋಲೀಸರಿಂದ ದಂಡ
0
ಜುಲೈ 25, 2022
Tags