ಮುಂಬೈ: ತಿರುವನಂತಪುರಂ - ನಿಜಾಮುದ್ದೀನ್ ಎಕ್ಸ್‍ಪ್ರೆಸ್‍ನಲ್ಲಿ ಬುಧವಾರ ರಾತ್ರಿ ಕಂಡುಬಂದ ಹಾವನ್ನು ಸೆರೆ ಹಿಡಿಯಲಾಗಿದೆ. ರೈಲು ಮುಂಬೈ ಸಮೀಪದ ವಸೈ ರೋಡ್ ರೈಲು ನಿಲ್ದಾಣಕ್ಕೆ ಬಂದಾಗ ಟಿಟಿಇ ಹಾವನ್ನು ಹಿಡಿದಿದ್ದಾರೆ. ರೈಲು ಮಲಪ್ಪುರಂ ತಿರೂರ್ ತಲುಪಿದಾಗ ಎಸ್ 5 ಕೋಚ್‍ನಲ್ಲಿ ಮೊದಲು ಹಾವು ಕಾಣಿಸಿಕೊಂಡಿತ್ತು. ಕೋಝಿಕ್ಕೋಡ್ ತಲುಪಿದಾಗ ಲಗೇಜ್ ಮತ್ತು ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಯಿತು, ಆದರೆ ಹಾವು ಪತ್ತೆಯಾಗಲಿಲ್ಲ.
ಸಾಮಾನು ಸರಂಜಾಮುಗಳ ನಡುವೆ ಅಡಗಿ ಕುಳಿತಿದ್ದ ಹಾವು ಗುರುವಾರ ವಸಾಯಿ ರಸ್ತೆ ನಿಲ್ದಾಣಕ್ಕೆ ಬಂದಾಗ ಮತ್ತೆ ತೆವಳುತ್ತಿರುವ ದೃಶ್ಯ ಕಂಡು ಬಂದಿದೆ. ವಸೈನಲ್ಲಿರುವ ಸ್ಟೇಷನ್ ಮಾಸ್ಟರ್ ಹಾವನ್ನು ಹಿಡಿಯಲು ಸಹಾಯವನ್ನು ಕೋರಿ ಘೋಷಣೆ ಮಾಡಿದರು.ಅದೇ ರೈಲಲ್ಲಿದ್ದ ಟಿಟಿಇ ಸುಕೇಶ್ ಕುಮಾರ್ ಹಾವು ಹಿಡಿಯಲು ಸಿದ್ಧರಾಗಿ ಮುಂದೆ ಬಂದರು. ಕಬ್ಬಿಣದ ರಾಡ್ ಅನ್ನು ತಲೆಗೆ ಒತ್ತಿ ಹಾವು ಹಿಡಿಯಲಾಯಿತು. ಬಿಹಾರದ ನಳಂದಾ ಮೂಲದ ಸುಕೇಶ್ ಕುಮಾರ್, ಯುವಕನಾಗಿದ್ದಾಗ ಗ್ರಾಮದಲ್ಲಿ ಹಾವು ಹಿಡಿದ ಅನುಭವ ನನಗೆ ಧೈರ್ಯ ತುಂಬಿತು ಎಂದಿರುವರು.
ನಿಜಾಮುದ್ದೀನ್ ಎಕ್ಸ್ ಪ್ರೆಸ್ ಹತ್ತಿದ ಹಾವು ಮುಂಬೈನಲ್ಲಿ ಪತ್ತೆ: ಹಿಡಿದ ಟಿಟಿಇ
0
ಜುಲೈ 31, 2022
Tags