ಮಂಜೇಶ್ವರ: ಬ್ಲಾಕ್ ಮಟ್ಟದ ಆರೋಗ್ಯ ಮೇಳ ಉಪ್ಪಳ ಎಜೆಐ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜು. 3ರಂದು ಜರುಗಲಿದೆ. ಶಾಸಕ ಎಕೆಎಂ ಅಶ್ರಫ್ ಸಮಾರಂಭ ಉದ್ಘಾಟಿಸುವರು. ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಶಮೀನಾ ಟೀಚರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ಯೋಜನೆ ಬಗ್ಗೆ ಮಾಹಿತಿ ನೀಡುರವರು.
ಬ್ಲಾಕ್ ಮಟ್ಟದ ಆರೋಗ್ಯ ಮೇಳದ ಅಂಗವಾಗಿ ಡಂಗುರ ಮೆರವಣಿಗೆ, ಘೋಷಣಾ ಮೆರವಣಿಗೆ, ಗುಂಪು ತರಬೇತಿ, ಜಾಗೃತಿ ವಿಚಾರ ಸಂಕಿರಣ, ಸೆಲ್ಫಿ ಕಾರ್ನರ್ ಆಯೋಜಿಸಲಾಗಿದೆ. ಮೇಳದಲ್ಲಿ ಜೀವನಶೈಲಿ ರೋಗ ನಿರ್ಣಯ ಶಿಬಿರ, ನೇತ್ರ ತಪಾಸಣಾ ಶಿಬಿರ, ಆಧುನಿಕ ಔಷಧ-ಆಯುರ್ವೇದ-ಹೋಮಿಯೋ ವೈದ್ಯಕೀಯ ಶಿಬಿರ, ವಿವಿಧ ಇಲಾಖೆಗಳ ಜಾಗೃತಿ ಮಳಿಗೆಗಳು, ಯುಡಿಐಡಿ ಅದಾಲತ್, ಪ್ರಸ್ನಾಂತರಿ ಸಪರ್ಧೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿರುವುದಾಗಿ ಪ್ರಕಟಣೆ ತಿಳಿಸಿದೆ.