HEALTH TIPS

ರಾಜ್ಯಸಭಾ ನಾಯಕರಾಗಿ ಕೇಂದ್ರ ಸಚಿವ ಪಿಯೂಷ್​ ಗೋಯಲ್​ ಮರು ನೇಮಕ

                    ನವದೆಹಲಿ: ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರನ್ನು ರಾಜ್ಯಸಭಾ ನಾಯಕರನ್ನಾಗಿ ಮರು ನೇಮಕ ಮಾಡಲಾಗಿದೆ. ಈ ಸಂಬಂಧ ರಾಜ್ಯಸಭಾ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಮಾಹಿತಿ ನೀಡಿದರು.

              2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಯೂಷ್​ ಗೋಯಲ್ ಅವರನ್ನು ರಾಜ್ಯಸಭೆಯ ನಾಯಕರನ್ನಾಗಿ ನೇಮಿಸಿದ್ದರು.

                ಬಳಿಕ ಗೋಯಲ್​​ ಅವರ ರಾಜ್ಯಸಭಾ ಸದಸ್ಯತ್ವದ ಅವಧಿ ಇದೇ ಏಪ್ರಿಲ್​ನಲ್ಲಿ ಕೊನೆಗೊಂಡಿತ್ತು. ಇದರಿಂದ ಸದನದ ನಾಯಕ ಸ್ಥಾನವೂ ಖಾಲಿಯಾಗಿತ್ತು.

                   ಕಳೆದ ಎರಡು ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ಮಹತ್ವದ ಮಸೂದೆಗಳನ್ನು ಅಂಗೀಕರಿಸುವಾಗ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದ ಬಿಜೆಡಿ, ಎಐಎಡಿಎಂಕೆಯಂತಹ ಪಕ್ಷಗಳ ಬೆಂಬಲ ಪಡೆದುಕೊಳ್ಳುವಲ್ಲಿ ಗೋಯಲ್ ಅವರು ಪ್ರಮುಖ ಪಾತ್ರ ವಹಿಸಿದ್ದರು.

                ಜುಲೈ 8 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಪಿಯೂಷ್​ ಗೋಯಲ್​ ಅವರು ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೀಗಾಗಿ ಅವರನ್ನು ಸದನದ ನಾಯಕರನ್ನಾಗಿ ಮರು ನೇಮಕಗೊಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries