HEALTH TIPS

ಮುಖ್ಯಮಂತ್ರಿಯ ತೆಗಳಿಕೆಗೆ ಉತ್ತರಿಸಿದ ಕೇಂದ್ರ ವಿದೇಶಾಂಗ ಸಚಿವರು; ರಾಜ್ಯ ಭೇಟಿಯು ವಿದೇಶಾಂಗ ನೀತಿಯ ಭಾಗವಾಗಿದೆ ಮತ್ತು ಜನರ ಹಿತಾಸಕ್ತಿಗಳೊಂದಿಗೆ ನಿಕಟವಾಗಿ ಪರಿಚಯಗೊಳ್ಳಲು: ಎಸ್ ಜೈಶಂಕರ್

                 ತಿರುವನಂತಪುರ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಟೀಕೆಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಗಳ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಜೈಶಂಕರ್  ಅವರು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಾಗ ಅವರು ರಾಜಕೀಯವನ್ನು ಏಕೆ ನೋಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದಿರುವರು.

                    ವಿವಿಧ ರಾಜ್ಯಗಳಿಗೆ ಭೇಟಿ ನೀಡುವುದು ಕೂಡ ವಿದೇಶಾಂಗ ನೀತಿಯ ಭಾಗವಾಗಿದೆ. ಈ ಪ್ರವಾಸವು ಜನರನ್ನು ಮತ್ತು ಅವರ ಆಸಕ್ತಿಗಳನ್ನು ತಿಳಿದುಕೊಳ್ಳಲು ಸಹ ಆಗಿದೆ. ಇಲ್ಲಿಂದ ಕಲಿತ ವಿಷಯಗಳು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವರದಿಯಾಗುತ್ತದೆ. ಕೇಂದ್ರದ ಯೋಜನೆಗಳ ಮೌಲ್ಯಮಾಪನ ಮಾಡುವುದು ಕೇಂದ್ರ ಸಚಿವರ ಜವಾಬ್ದಾರಿ ಮತ್ತು ಕರ್ತವ್ಯ. ಇದರಲ್ಲಿ ರಾಜಕೀಯ ಏಕೆ ಕಾಣಿಸುತ್ತಿದೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಎಸ್ ಜಯಶಂಕರ್  ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅಭಿವೃದ್ಧಿ ಬಗ್ಗೆ ಮಾತನಾಡುವಾಗ ಇತರರು ಅದನ್ನು ರಾಜಕೀಯವಾಗಿ ನೋಡುತ್ತಾರೆ ಎಂದು ಬೊಟ್ಟುಮಾಡಿರುವರು.

                 ಎಸ್.ಜಯಶಂಕರ್ ಅವರ ಕೇರಳ ಭೇಟಿಯನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಲೇವಡಿ ಮಾಡಿದ್ದರು. ಲೋಕಕಾರ್ಯದಲ್ಲಿ ನಿರತರಾಗಿರುವ ಸಚಿವರು ಕಳಕೂಟಕ್ಕೆ ಏಕೆ ಬಂದಿದ್ದಾರೆ ಎಂಬುದು ಮುಖ್ಯಮಂತ್ರಿಗಳು ಪ್ರಶ್ನಿಸಿದ್ದರು. ಆದರೆ ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಪಿಣರಾಯಿ ವಿಜಯನ್‍ಗೆ ಉತ್ತರ ನೀಡಿದ್ದು, ವಿದೇಶಾಂಗ ಸಚಿವರು ಎಂದರೆ ವಿದೇಶದಲ್ಲಿರುವ ಸಚಿವರಲ್ಲ, ಕೇರಳಕ್ಕೆ ಬಂದು ಪರಿಸ್ಥಿತಿಯನ್ನು ಅವಲೋಕಿಸುವ ಅಧಿಕಾರ ಇದೆ ಎಂದು ಹೇಳಿದ್ದಾರೆ. ಜನರು ಸಂಕಷ್ಟದಲ್ಲಿದ್ದಾಗ ಹಿಂತಿರುಗಿ ನೋಡದ ಮುಖ್ಯಮಂತ್ರಿ, ಕೇಂದ್ರ ಸಚಿವರೊಬ್ಬರು ಜನರ ಹಿತಕಾಯಲು ಹೊರಟರೆ ಅನಾನುಕೂಲವಾಗುತ್ತದೆ ಎಂದು ಮುರಳೀಧರನ್ ಹೇಳಿದ್ದಾರೆ.

                  ಈ ಮಧ್ಯೆ ಕೇಂದ್ರ ಸಚಿವ ಎಸ್ ಜೈಶಂಕರ್ ಕೂಡ ವಿವಾದಿತ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮದವರನ್ನು ಭೇಟಿಯಾಗಿ ಪ್ರತಿಕ್ರಿಯಿಸಿದ್ದಾರೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸೂಕ್ತ ಸಮಯಕ್ಕೆ ಕ್ರಮ ಕೈಗೊಳ್ಳಲಾಗುವುದು. ಕೇಂದ್ರ ಏಜೆನ್ಸಿಗಳ ಮೇಲೆ ತಮಗೆ ನಂಬಿಕೆ ಇದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬುದು ಅವರ ಪ್ರತಿಕ್ರಿಯೆಯಾಗಿತ್ತು. ಶ್ರೀಲಂಕಾದಲ್ಲಿ ನಡೆಯುತ್ತಿರುವ ರಾಜಕೀಯ-ಆರ್ಥಿಕ ಬಿಕ್ಕಟ್ಟು ಬಹಳ ಸಂಕೀರ್ಣ ವಿಷಯವಾಗಿದೆ ಮತ್ತು ಭಾರತವು ದ್ವೀಪ ರಾಷ್ಟ್ರದ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಅವರು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries