ಪಾಲಕ್ಕಾಡ್: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಪಿ.ಟಿ. ಉಷಾ ಮಾಧ್ಯಮದವರನ್ನು ಭೇಟಿಯಾದರು. ಬಿಜೆಪಿ ನಾಯಕರು ಪಿಟಿ ಉಷಾ ಅವರ ನಿವಾಸಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದ ಬಳಿಕ ಉಷಾ ಪ್ರತಿಕ್ರಿಯೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ ಅವರು ಹೊಸ ಸ್ಥಾನ ಸಿಕ್ಕ ಬಗ್ಗೆ ಉತ್ಸುಕತೆ ಏನೂ ಇಲ್ಲ,ಆದರೆ ಶುಭಹಾರೈಸಿದ ಎಲ್ಲರಿಗೂ ವಮದನೆಗಳು ಎಂದರು.
ಎಳಮರಮ್ ಕರೀಂ ಅವರ ವಿವಾದಾತ್ಮಕ ಹೇಳಿಕೆಗೆ ಪಿಟಿ ಉಷಾ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ. ತನಗೆ ಕ್ರೀಡೆಯಷ್ಟೇ ಮಹತ್ತರವಾದುದು, ರಾಜಕೀಯವಲ್ಲ ಎಂದಿರುವರು. ಎಲಮರಮ್ ಕರೀಂ ಅವರನ್ನು ಗೌರವಿಸುವೆ ಮತ್ತು ನಿಕಟವಾಗಿ ತಿಳಿದಿರುವ ನಾಯಕ ಎಂದರು. ಅವರ ಹೇಳಿಕೆಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಮತ್ತು ಅನೇಕರು ಅನೇಕ ಅಭಿಪ್ರಾಯಗಳನ್ನು ಹೊಂದಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ಜೊತೆಗೆ, ಬಿಜೆಪಿ ನಾಯಕರು ಮಾತ್ರ ಅಭಿನಂದಿಸಿದ್ದಲ್ಲದೆ, ಮುಖ್ಯಮಂತ್ರಿಗಳು ಫೇಸ್ ಬುಕ್ ಪೋಸ್ಟ್ ಮೂಲಕ ಹಾಗೂ ಕಾಂಗ್ರೆಸ್ ಮುಖಂಡರಾದ ರಮೇಶ್ ಚೆನ್ನಿತ್ತಲ, ತಿರುವಾಂಜೂರು ರಾಧಾಕೃಷ್ಣನ್ ಮತ್ತು ಸಿಪಿಎಂ ಮುಖಂಡ ಎಕೆ ಬಾಲನ್ ನೇರವಾಗಿ ದೂರವಾಣಿ ಮೂಲಕ ಅಭಿನಂದಿಸಿದ್ದಾರೆ ಎಂದು ಪಿಟಿ ಉಷಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.