ಕಾಸರಗೋಡು: ಜಲ ಜೀವನ್ ಮಿಷನ್ ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ವತಿಯಿಂದ ಸಾಮಾಜಿಕ ಸಬಲೀಕರಣ ಯೋಜನೆಯ ಅಂಗವಾಗಿ ಕುಟುಂಬಶ್ರೀ ಸಿಡಿಎಸ್ ಸದಸ್ಯರಿಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಪಳ್ಳಿಕ್ಕೆರೆ ಸಿಡಿಎಸ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಡಿಎಸ್ ಅಧ್ಯಕ್ಷೆ ಎಂ.ಬೀನಾ ಅಧ್ಯಕ್ಷತೆ ವಹಿಸಿದ್ದರು. ನೀರಿನ ಸುಸ್ಥಿರ ಸಂಪನ್ಮೂಲ ವ್ಯಕ್ತಿ ಪಿ ಅಂತೋಣಿ ಮಾತನಾಡಿ, ಮನೆಗಳಲ್ಲಿ ಪೈಪ್ ಸಂಪರ್ಕ ಲಭ್ಯವಾಗುವುದರ ಮಹತ್ವ ಮತ್ತು ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಸಾಮಾಜಿಕ ಸಬಲೀಕರಣ ಸಂಯೋಜಕಿ ಮೂಸಾ ಸಾಬಿತ್, ಸುಸ್ಥಿರ ಯೋಜನೆಯ ಸಂಯೋಜಕ ನೋಯೆಲ್, ಸಿಡಿಎಸ್, ಎಡಿಎಸ್ ಸದಸ್ಯರು ಭಾಗವಹಿಸಿದ್ದರು.