ಕುಂಬಳೆ: ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ಶಾಲಾಮಟ್ಟದ ವಿಜ್ಞಾನ ಮೇಳ ನಿನ್ನೆ ನಡೆಯಿತು.
ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಭಟ್ ಇವರು "ಪಠ್ಯಧಾರಿತ ಕಲಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಶ್ಲಾಘಿಸಿ ಕಲಿಕೆಯ ಮೂಲಕ ಆರ್ಜಿಸಿದ ಜ್ಞಾನವನ್ನು ಅಂತರಂಗದೊಳಗೆ ಮುದುಡಿರುವ ಸಾಮಥ್ರ್ಯದ ಪೂರಕ ಬೆಳವಣಿಗೆಗೆ ತೊಡಗಿಸಿಕೊಳ್ಳುವಲ್ಲಿ ವಿಜ್ಞಾನ ಮೇಳ ನೆರವಾಗುತ್ತದೆ. ವಿಜ್ಞಾನವೆಂದರೆ ಅನುಭವ, ಅಧ್ಯಯನಗಳ ಮೂಲಕ ಹೊಸತನದರ ಸಂಶೋಧನೆಯಾಗಿದೆ ಎಂದರು".
ಶಾಲಾ ಮುಖ್ಯೋಪಾಧ್ಯಾಯ ಇ.ಎಚ್ ಗೋವಿಂದ ಭಟ್ ಇವರು ಸ್ಪರ್ಧೆಗಳಲ್ಲಿ ಭಾಗವಹಿಸುವ ಎಲ್ಲಾ ವಿದ್ಯಾರ್ಥಿಗಳಿಗೂ ಶುಭಹಾರೈಸಿದರು. ನೌಕರ ಸಂಘದ ಕಾರ್ಯದರ್ಶಿ ರಾಮಕೃಷ್ಣ ಭಟ್ ಶುಭಾಶಂಸನೆಗೈದರು.
ಶಾಲಾ ನಾಯಕಿ ಹರ್ನಿತ ಸ್ವಾಗತಿಸಿ,ರಾಮ್ ಸ್ವರೂಪ್ ಆಳ್ವ ವಂದಿಸಿದನು.ಲಾಸ್ಯ ಕಾರ್ಯಕ್ರಮವನ್ನು ನಿರೂಪಿಸಿದಳು.
ಈ ಸಂದರ್ಭ ಸುಮಾರು 200 ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ,ಗಣಿತ,ಐಟಿ,ಸಮಾಜ ವಿಜ್ಞಾನ,ವರ್ಕ್ ಎಕ್ಸ್ ಪೀರಿಯೆನ್ಸ್ ವಿಭಾಗಗಳಲ್ಲಿ ಸಕ್ರಿಯವಾಗಿ ಭಾಗವಹಿದಸಿ ತಮ್ಮ ಕೌಶಲವನ್ನು ಪ್ರದರ್ಶಿಸಿದರು.
ವಿಜ್ಞಾನವೆಂದರೆ ಅಧ್ಯಯನ,ಅನುಭವಗಳ ಮೂಲಕ ಹೊಸತನದ ಸಂಶೋಧನೆ: ಶಂಕರನಾರಾಯಣ ಭಟ್: ಧರ್ಮತ್ತಡ್ಕ ಪ್ರೌಢಶಾಲೆ ವಿಜ್ಞಾನ ಮೇಳ ಉದ್ಘಾಟಿಸಿ ಅಭಿಮತ
0
ಜುಲೈ 31, 2022