HEALTH TIPS

ದೇಶದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್


                 ಕಾಸರಗೋಡು: ದೇಶದ ಅಭಿವೃದ್ಧಿಯಲ್ಲಿ ರಾಜಕೀಯ ಮಾಡಬಾರದು ಎಂದು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಹೇಳಿರುವರು. ಜನರ ಜೊತೆಯಾಗಿ ಮುನ್ನಡೆಯುವುದು ಆಡಳಿತ ಮಾಡುವ ಸರ್ಕಾರಗಳ  ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಸಂಸದರು ಹೇಳಿದರು.
             ಅಜಾದಿಕ ಅಮೃತ್ ಮಹೋತ್ಸವದ ಭಾಗವಾಗಿ ಬಿಜಲಿ ಮಹೋತ್ಸವ್ ಕಾರ್ಯಕ್ರಮವನ್ನು ನಿನ್ನೆ  ಕಾಸರಗೋಡು ಮುನ್ಸಿಪಲ್ ಸಭಾಂಗಣದಲ್ಲಿ ಉದ್ಘಾಟಿಸಿ ಅವರು  ಮಾತನಾಡಿದರು.
            ಸÀರ್ಕಾರದ ಉತ್ತರವಾದಿತ್ವವನ್ನು ನಿರ್ವಹಿಸುವುದರ ಭಾಗವಾಗಿ ಜನರಿಗೆ ಸರ್ಕಾರವು ನೀಡುವ ಸವಲತ್ತುಗಳು ಅವರಿಗೆ ಲಭಿಸುತ್ತದೆಯೊ ಎಂದು ತಿಳಿದು ಅದನ್ನು ತಲಪಿಸುವಕಾರ್ಯ ಮಾಡಬೇಕು. ಸವಲತ್ತುಗಳ  ಕುರಿತು ಜನರಲ್ಲಿ  ಜಾಗೃತಿ ಮೂಡಿಸುವ ಭಾಗವಾಗಿ ಮಹೋತ್ಸವವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.



              ಭಾರತದ 75 ನೇಯ ಸ್ವಾತಂತ್ರ್ಯೋತ್ಸವ ಆಜಾದಿ ಕ ಅಮೃತ್  ಮಹೋತ್ಸವ "ಉಜ್ವಲ್ ಭಾರತ್ ಉಜ್ವಲ್ ಭವಿಷ್ಯ ಪವರ್ @2047" ವಿದ್ಯುತ್ ಮಹೋತ್ಸವ ನಡೆಯಿತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು  ವಿದ್ಯುತ್ ಇಲಾಖೆಯಲ್ಲಿ ಗಳಿಸಿದ ಒಳಿತುಗಳನ್ನು ಜನರಿಗೆ ತಿಳಿಸಲೂ ಸಾರ್ವಜನಿಕ ಸಹಭಾಗಿತ್ವವನ್ನು ಹೆಚ್ಚಿಸಲು ಕಾರ್ಯಕ್ರಮಗಳನ್ನು ನಡೆಸುವುದು.
              ಶಾಸಕ ಎನ್  ಎ ನೆಲ್ಲಿಕ್ಕುನ್ನು ಅಧ್ಯಕ್ಷತೆ ವಹಿಸಿದರು. ಶಾಸಕ ಎ  ಕೆ  ಎಂ ಅಶ್ರಫ್, ಸಿ ಎಚ್ ಕುಂಞಂಬು, ಕಾಸರಗೋಡು ನಗರ ಸಭಾ ಅಧ್ಯಕ್ಷ ನ್ಯಾಯವಾದಿ ವಿ ಎಂ ಮುನೀರ್, ಪವರ್ ಫೈನಾನ್ಸ್ ಕಾಪೆರ್Çರೇಷನ್ ಜಿಲ್ಲಾ ನೋಡೆಲ್ ಆಫೀಸರ್ ಕೆ ಬಿಪಿನ್ ಮೊದಲಾದವರು ಮಾತನಾಡಿದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಸ್ವಾಗತಿಸಿ,  ಕೆ ಎಸ್ ಇ  ಬಿ ಕಾಸರಗೋಡು ಎಲೆಕ್ಟ್ರಿಕಲ್ ಸರ್ಕಲ್ ಡೆಪ್ಯುಟಿ ಚೀಫ್ ಎಂಜಿನಿಯರ್ ಟಿ ಪಿ ಹೈದರಾಲಿ ವಂದಿಸಿದರು.


              ಸಂಪೂರ್ಣ ಗ್ರಾಹಕ ವಿದ್ಯುತ್ತೀಕರಣ, ಗ್ರಾಮ ವಿದ್ಯುತ್ತೀಕರಣ,  ವಿದ್ಯುತ್ ವಿತರಣಾ ಪದ್ಧತಿಯ ಶಾಕ್ತೀಕರಣ, ವಿದ್ಯುತ್ ಫಲಾನುಭವಿಗಳ ಸಾಧನೆ, ವಿದ್ಯುತ್ ಇಲಾಖೆಯ ಬೆಳವಣಿಗೆ, ಒಂದು ದೇಶ ಒಂದು ಗ್ರಿಡ್ ಪದ್ಧತಿ, ನವೀಕರಿಸಲಾಗುವ ಶಕ್ತಿಯ ಮೂಲಗಳ ಬಳಕೆ, ಗ್ರಾಹಕರ ಅವಕಾಶಗಳೇ ಮೊದಲಾದ ವಿಷಯ ಗಳಲ್ಲಿ ವಿಡಿಯೋ ಪ್ರದರ್ಶನ ನಡೆಯಿತು. ಫಲಾನುಭವಿಗಳು ತಮ್ಮ ಅನುಭವ ಗಳನ್ನು ಹಂಚಿಕೊಂಡರು. ಯಕ್ಷಗಾನ ಪ್ರದರ್ಶನ ಸಹಿತ ವಿವಿಧ ಸಾಂಸ್ಕøತಿಕ  ಕಾರ್ಯಕ್ರಮಗಳು ನಡೆದವು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries