ತಿರುವನಂತಪುರ: ಮಸಾಲೆ ಪುಡಿಗಳಲ್ಲಿ (ಕರಿ ಪೌಡರ್) ಕಲಬೆರಕೆ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
‘ಉತ್ತಮ ಆಹಾರ ರಾಜ್ಯದ ಹಕ್ಕು’ ಎಂಬ ಅಭಿಯಾನದ ಅಂಗವಾಗಿ ಪರಿಶೀಲನೆ ನಡೆಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು. ಎಲ್ಲ ಜಿಲ್ಲೆಗಳಲ್ಲಿ ತಪಾಸಣೆಯನ್ನು ಬಲಪಡಿಸಲಾಗುವುದು. ಇದಕ್ಕಾಗಿ ಜಿಲ್ಲೆಗಳಲ್ಲಿ ವಿಶೇಷ ಸ್ಕ್ವಾಡ್‍ಗಳನ್ನು ನೇಮಿಸಲಾಗುವುದು ಎಂದಿರುವರು.
ತಪಾಸಣೆ ವೇಳೆ ಬಳಕೆಗೆ ಯೋಗ್ಯವಲ್ಲದ ಮಾದರಿಗಳು ಕಂಡುಬಂದಲ್ಲಿ ಕರಿ ಪೌಡರ್ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು. ಯಾವುದೇ ಕಲಬೆರಕೆ ವಶಪಡಿಸಿಕೊಂಡರೆ, ಅವುಗಳನ್ನು ಸಂಪೂರ್ಣವಾಗಿ ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಲು ಕ್ರಮಕೈಗೊಳ್ಳಲಾಗುವುದು. ಈ ಬಗ್ಗೆ ಮಾರಾಟಗಾರ ಮತ್ತು ಕಂಪನಿಗೆ ನೋಟಿಸ್ ನೀಡಲಾಗುವುದು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೀಣಾ ಜಾರ್ಜ್ ತಿಳಿಸಿದ್ದಾರೆ.
ಕರಿ ಪೌಡರ್ ಪರೀಕ್ಷಿಸಲು ಮೊಬೈಲ್ ಲ್ಯಾಬ್‍ಗಳನ್ನು ಸಹ ಬಳಸಲಾಗುವುದು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ನಿಗದಿಪಡಿಸಿದ ಗುಣಮಟ್ಟದಿಂದ ಉತ್ಪನ್ನಗಳು ಹೊರಗುಳಿಯುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದು. ಸರ್ಕಾರದ ಸೂಚನೆಯಂತೆ ಆಹಾರ ಸುರಕ್ಷತಾ ಇಲಾಖೆ ರಾಜ್ಯದಲ್ಲಿ ತಪಾಸಣೆಯನ್ನು ತೀವ್ರಗೊಳಿಸಿದೆ. ಸದ್ಯ ಆಹಾರ ಸುರಕ್ಷತಾ ಇಲಾಖೆಯಿಂದ ರಾಜ್ಯಾದ್ಯಂತ 9,005 ತಪಾಸಣೆ ನಡೆಸಲಾಗಿದೆ ಎಮದು ಸಚಿವರು ಮಾಹಿತಿ ನೀಡಿರುವರು.
ಮಸಾಲೆ ಪುಡಿಗಳ ಕಲಬೆರಕೆ ಕಂಡುಬಂದರೆ ಕ್ರಮ: ತಪಾಸಣೆ ಬಲಪಡಿಸಲಾಗುವುದು ಎಂದ ಸಚಿವೆ ವೀಣಾ ಜಾರ್ಜ್
0
ಜುಲೈ 29, 2022