ಭಾರತದ ಯುವ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಪ್ಯಾರಾಸಿನ್ ಓಪನ್ 'ಎ' ಚೆಸ್ ಟೂರ್ನಮೆಂಟ್ ಗೆದ್ದು ಬೀಗಿದ್ದಾರೆ.
16 ವರ್ಷದ ಅಜೇಯರಾಗಿ ಉಳಿದಿದ್ದು ಅರ್ಧ ಪಾಯಿಂಟ್‌ಗಳಿಂದ ಮುಂದೆ ಮುಗಿಸಿದರು. ಇನ್ನು ಅಲೆಕ್ಸಾಂಡರ್ ಪ್ರೆಡ್ಕೆ ಅವರು ಅಲಿಶರ್ ಸುಲೇಮೆನೋವ್ ಮತ್ತು ಭಾರತದ ಎಎಲ್ ಮುತ್ತಯ್ಯ ಅವರಿಗಿಂತ 7.5 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.
ಹದಿಹರೆಯದ ಪ್ರಗ್ನಾನಂದ ಜುಲೈ 28 ರಿಂದ ಚೆನ್ನೈ ಬಳಿ ನಡೆಯಲಿರುವ 44 ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಬಲಿಷ್ಠ ಭಾರತ 'ಬಿ' ತಂಡದ ಭಾಗವಾಗಲಿದ್ದಾರೆ.