ಆಲಪ್ಪುಳ: ಪ್ರತಿಭಟನೆಯ ನಡುವೆಯೇ ಶ್ರೀರಾಮ್ ವೆಂಕಟರಾಮನ್ ಅವರು ಅಲಪ್ಪುಳ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಇಂದು ಬೆಳಗ್ಗೆ ಅಲಪ್ಪುಳ ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ಅಲಪ್ಪುಳ ಕಲೆಕ್ಟರ್ ಆಗಿದ್ದ ಡಾ.ರೇಣು ರಾಜ್ ಅವರನ್ನು ಎರ್ನಾಕುಳಂ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದ್ದು, ಶ್ರೀರಾಮ್ ಹೊಸ ಜಿಲ್ಲಾಧಿಕಾಗಿರುವರು.
ಪತ್ರಕರ್ತ ಬಶೀರ್ ಸಾವಿನ ಪ್ರಕರಣದಲ್ಲಿ ಶ್ರೀರಾಮ್ ವೆಂಕಟರಾಮನ್ ಮೊದಲ ಆರೋಪಿಯಾಗಿದ್ದಾರೆ. ಶ್ರೀರಾಮ್ ವಿರುದ್ಧದ ಪ್ರಕರಣದಲ್ಲಿ ಜಿಲ್ಲಾಧಿಕಾರಿ ನೇಮಕವನ್ನು ವಿರೋಧಿಸಿ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಕೆಲವು ಇಸ್ಲಾಮಿಕ್ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಬೆಳಗ್ಗೆ ಅಲಪ್ಪುಳ ಜಿಲ್ಲಾಧಿಕಾರಿ ಕಚೇರಿ ಎದುರು ಕಾಂಗ್ರೆಸ್ಸ್ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿ ಕಚೇರಿ ಹೊರಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರೀರಾಮ್ ಅವರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಪ್ರತಿಭಟನಾ ನಿರತ ಕಾರ್ಯಕರ್ತರ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದರು.
ಅಲಪ್ಪುಳ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡ ಶ್ರೀರಾಮ್ ವೆಂಕಟರಾಮನ್ : ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸಿದ ಯುವ ಕಾಂಗ್ರೆಸ್ ; ಪೋಲೀಸರಿಂದ ಲಾಠಿ ಪ್ರಹಾರ
0
ಜುಲೈ 26, 2022