ಬದಿಯಡ್ಕ: ಶ್ರೀ ಎಡನೀರು ಮಠ ಸಾಂಸ್ಕøತಿಕ ಕ್ಷೇತ್ರದ ಹೃದಯವಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ತಿಳಿಸಿದ್ದಾರೆ. ಅವರು ಶ್ರೀ ಎಡನೀರು ಮಠದ ಪರಮ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ದ್ವಿತೀಯ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದ ಎಲ್ಲ ಸ್ತರದ ಜನತೆ ಒಟ್ಟುಗೂಡುವಿಕೆಯಿಂದ ಮಾತ್ರ ಕ್ಷೇತ್ರಗಳ ಸಮಗ್ರ ಅಭಿವೃದ್ಧಿ ಸಾಧ್ಯ. ಯಕ್ಷಗಾನ ಸೇರಿದಂತೆ ಸಾಂಸ್ಕøತಿಕ ಪರಂಪರೆಯನ್ನು ಪೋಷಿಸಿಕೊಂಡು ಬರುತ್ತಿರುವ ಶ್ರೀ ಎಡನೀರು ಮಠ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದ ನಡುವಿನ ಸಂಬಂಧ ಅವಿನಾಭಾವವಾದುದು. ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ಹೊಸ ಪ್ರತಿಭೆಗಳಿಗೆ ಪ್ರಯೋಜನಪ್ರದವಾಗಲಿ ಎಂದು ತಿಳಿಸಿದರು.
ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಹಿಂಸೆಯ ಹಾದಿ ಬಿಟ್ಟು ಪ್ರತಿಯೊಬ್ಬ ಉದಾತ್ತ ಚಿಂತನೆ ಮೈಗೂಡಿಸಿಕೊಂಡಾಗ ದೇಶ ಸುಭಿಕ್ಷೆಯತ್ತ ಸಾಗಲು ಸಾಧ್ಯ. ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಸನಾತನ ಧರ್ಮಕ್ಕೆ ಸಂದ ಗೆಲುವಾಗಿದೆ ಎಂದು ತಿಳಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಮಾಜಿ ಶಾಸಕ ಕೆ. ಕುಞÂರಾಮನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸುರೇಶ್ ಕೆ. ನಾಯಕ್ ಉಪಸ್ಥಿತರಿದ್ದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ. ಟಿ.ಶಾಮ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ರಾಜೇಂದ್ರ ಕಲ್ಲೂರಾಯ ಸ್ವಾಗತಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಯ್ಯೂರು ನಾರಾಯಣ ಭಟ್ ವಂದಿಸಿದರು. ಯಕ್ಷಗಾನ ಭಾಗವತ ದಿನೇಶ್ ಅಮ್ಮಣ್ಣಾಯ ಪ್ರಾರ್ಥನೆ ಹಾಡಿದರು. ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರೀ ಗುರುಗಳನ್ನು ಗೌರವಿಸಲಾಯಿತು. ವಿವಿಧ ಗಭ್ಯರನ್ನು ಸ್ವಾಮೀಜಿ ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಅಂಗವಾಗಿ ಹನುಮಗಿರಿ ಶ್ರೀ ಕೋದಂಡರಾಮ ಯಕ್ಷಗಾನ ಮಂಡಳಿಯಿಂದ 'ಕೃಷ್ಣ ಲೀಲೆ-ಕರ್ಣ ಪರ್ವ-ಗಧಾ ಪರ್ವ'ಯಕ್ಷಗಾನ ಬಯಲಾಟ ನಡೆಯಿತು.