ಮಧೂರು : ಮಧೂರು ಗ್ರಾಮ ಪಂಚಾಯಿತಿ ವತಿಯಿಂದ ಶಿರಿಬಾಗಿಲು ಭತ್ತದ ಗದ್ದೆಯಲ್ಲಿ ಮಳೆಹಬ್ಬ ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಗೋಪಾಲ ಕೃಷ್ಣ ಸಮಾರಂಭ ಉದ್ಘಾಟಿಸಿದರು. ಪಂಚಾಯಿತಿ ಸಿ.ಡಿ.ಎಸ್ ಅಧ್ಯಕ್ಷೆ ಎ. ಸುಮಾ ಅಧ್ಯಕ್ಷತೆ ವಹಿಸಿದ್ದರು.
ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸೈಮಾ ಮುಖ್ಯ ಅತಿಥಿಯಾಗಿದ್ದರು. ಟೌನ್ ಸಿ.ಐ. ಪಿ.ಅಜಿತ್ ಕುಮಾರ್, ಪಂಚಾಯಿತಿ ಉಪಾಧ್ಯಕ್ಷೆ ಸ್ಮಿಜಾ ವಿನೋದ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಧಾಕೃಷ್ಣ ಸೂರ್ಲು, ಉಮೇಶ್ ಗಟ್ಟಿ ಉಳಿಯ, ಯಶೋದಾ ಎಸ್, ನಾಯ್ಕ್, ಬ್ಲಾಕ್ ಪಂಚಾಯಿತಿ ಸದಸ್ಯ ಸುಕುಮಾರ್ ಕುದುರೆಪಾಡಿ, ಗ್ರಾಪಂ ಸದಸ್ಯರು, ಕುಟುಂಬಶ್ರೀ ಸದಸ್ಯರು ಪಾಲ್ಗೊಂಡಿದ್ದರು. ಸಹಾಯಕ ಕಾರ್ಯದರ್ಶಿ ಎಸ್.ಥಾಮಸ್ ಸ್ವಾಗತಿಸಿದರು. ಕುಟುಂಬಶ್ರೀ ಉಪಾಧ್ಯಕ್ಷೆ ಎಂ.ಶ್ರೀಲತಾ ವಂದಿಸಿದರು. ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರು ಕೆಸರುಗದ್ದೆಯಲ್ಲಿ ನಡೆದ ನಾನಾ ತರದ ಆಟೋಟಗಳಲ್ಲಿ ಭಾಗವಹಿಸಿದ್ದರು.