ಚೆನ್ನೈ: ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್‌ನ ಎಂಎ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ 'ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?' ಎಂದು ಪ್ರಶ್ನೆಯೊಂದನ್ನು ಕೇಳಲಾಗಿದೆ. ಹೀಗಾಗಿ ವಿವಾದ ಉದ್ಭವವಾಗಿದೆ.
ಚೆನ್ನೈ: ಪೆರಿಯಾರ್ ವಿಶ್ವವಿದ್ಯಾನಿಲಯದ ಎರಡನೇ ಸೆಮಿಸ್ಟರ್‌ನ ಎಂಎ ಪರೀಕ್ಷೆಯ ಇತಿಹಾಸ ಪ್ರಶ್ನೆ ಪತ್ರಿಕೆಯಲ್ಲಿ 'ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?' ಎಂದು ಪ್ರಶ್ನೆಯೊಂದನ್ನು ಕೇಳಲಾಗಿದೆ. ಹೀಗಾಗಿ ವಿವಾದ ಉದ್ಭವವಾಗಿದೆ.
ಈ ವಿಷಯವನ್ನು ಪರಿಶೀಲಿಸಲು ತನಿಖಾ ಸಮಿತಿಯನ್ನು ರಚಿಸುವುದಾಗಿ ವಿವಿ ತಿಳಿಸಿದೆ.
1880 ರಿಂದ 1947 ರವರೆಗಿನ ತಮಿಳುನಾಡಿನ ಸ್ವಾತಂತ್ರ್ಯ ಚಳವಳಿಯ ಕುರಿತು ಇತಿಹಾಸ ಪ್ರಶ್ನೆ ಪತ್ರಿಕೆಯ ಭಾಗ-'ಎ'ನಲ್ಲಿ ಒಂದು ಅಂಕದ, ಬಹುಆಯ್ಕೆಯ 15 ಪ್ರಶ್ನೆಗಳನ್ನು ಕೇಳಲಾಗಿದೆ. ಈ ಸರಣಿಯ 11ನೇ ಪ್ರಶ್ನೆ ಹೀಗಿದೆ: 'ತಮಿಳುನಾಡಿಗೆ ಸೇರಿದ ಕೆಳಜಾತಿ ಯಾವುದು?' ಎಂದು ಕೇಳಲಾಗಿದೆ.
ಈ ವಿಷಯ ತಮಿಳುನಾಡಿನಲ್ಲಿ ಸದ್ಯ ವಿವಾದ ಹುಟ್ಟು ಹಾಕಿದೆ.
ತಪ್ಪಿತಸ್ಥರ ವಿರುದ್ಧ ವಿವಿ ಕ್ರಮ ಕೈಗೊಳ್ಳಲಿದೆ ಎಂದು ಪೆರಿಯಾರ್ ವಿಶ್ವವಿದ್ಯಾಲಯದ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.
ಈ ಪ್ರಶ್ನೆ ಕೇಳಿದ್ದಕ್ಕಾಗಿ ಸಾಮಾಜಿಕ ಮಾಧ್ಯಮದಲ್ಲಿ ವಿಶ್ವವಿದ್ಯಾಲಯ ಮತ್ತು ಅದರ ಇತಿಹಾಸ ವಿಭಾಗವನ್ನು ಟೀಕೆಗೆ ಗುರಿಪಡಿಸಲಾಗಿದೆ.
***
ನಾವು ಈ ಬಗ್ಗೆ ವಿಚಾರಣೆ ನಡೆಸಿದ್ದೇವೆ. ಪ್ರಶ್ನೆಯು ಪಠ್ಯಕ್ರಮದ ಭಾಗವಾಗಿದೆ ಎಂದು ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಶಿಕ್ಷಕರು ಹೇಳಿದ್ದಾರೆ. ಆದರೆ, ಈ ಪ್ರಶ್ನೆಯನ್ನು ತಪ್ಪಿಸಬಹುದಿತ್ತು.
- ಡಿ.ಗೋಪಿ, ಕುಲಸಚಿವ