HEALTH TIPS

ವಿವಾಹಪೂರ್ವ ಲೈಂಗಿಕತೆ ಹಾಗೂ ಗರ್ಭಾವಸ್ಥೆಗೆ ನನ್ನ ಬೆಂಬಲವಿದೆ: ಮತ್ತೆ ಟ್ರೋಲ್​ ಆದ ದಿಯಾ ಮಿರ್ಜಾ

          ಮುಂಬೈ: ಇತ್ತೀಚಿನ ದಿನಗಳಲ್ಲಿ ವಿವಾಹದ ಬಗ್ಗೆಗಿನ ಹಲವು ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ವಿವಾಹ ಪೂರ್ವ ಲೈಂಗಿಕತೆ ಹಾಗೂ ಗರ್ಭಾವಸ್ಥೆ ಕುರಿತು ಪರ-ವಿರೋಧ ಚರ್ಚೆಗಳು ಕೂಡ ನಡೆಯುತ್ತಿವೆ.

            ಸದ್ಯ ಈ ಬಗ್ಗೆ ಬಾಲಿವುಡ್​ ನಟಿ ದಿಯಾ ಮಿರ್ಜಾ ಅವರು ಈ ರೀತಿ ಹೇಳಿಕೆ ಕೊಟ್ಟು ಟೀಕೆಗೆ ಗುರಿಯಾಗಿದ್ದಾರೆ.

             ವಿವಾಹ ಪೂರ್ವ ಲೈಂಗಿಕತೆ ಮತ್ತು ಗರ್ಭಾವಸ್ಥೆ ಅವರವರ ವೈಯಕ್ತಿಕ ವಿಚಾರವಾಗಿದ್ದು, ನಾವು ಇಂದಿಗೂ ಚಿಂತಿಸುವಷ್ಟು ಪ್ರಬುದ್ಧತೆ ಹೊಂದಿಲ್ಲ ಎಂದು ನನಗನಿಸುತ್ತೆ ಎಂದು ಹೇಳಿದ್ದಾರೆ.

ಈ ರೀತಿಯ ನಿರ್ಧಾರ ತೆಗೆದುಕೊಳ್ಳುವವರು ತಪ್ಪಿತಸ್ಥರೇನೂ ಅಲ್ಲ, ಇದನ್ನು ಸಂಭ್ರಮಿಸಿ, ಜನರು ಯೋಚಿಸುವಷ್ಟು ಪ್ರಗತಿಪರರಲ್ಲ ಎಂದಿರುವ ದಿಯಾ, ವಿವಾಹ ಪೂರ್ವ ಲೈಂಗಿಕತೆ ಬಗ್ಗೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.

                  2021ರ ಫೆಬ್ರವರಿಯಲ್ಲಿ ಉದ್ಯಮಿ ವೈಭವ್​ ರೇಖಿ ಅವರನ್ನು ಎರಡನೇ ವಿವಾಹವಾದ ದಿಯಾ ಮಿರ್ಜಾ ಅವರು, ಕೆಲವೇ ದಿನಗಳಲ್ಲಿ ತಾನು ಗರ್ಭಿಣಿ ಎಂದು ಘೋಷಿಸಿದ್ದರು. ಇದರಿಂದ ಭಾರೀ ಟೀಕೆಗೊಳಗಾಗಿದ್ದ ದಿಯಾ ಈ ಬಗ್ಗೆಯೂ ಪ್ರತಿಕ್ರಿಯಿಸಿ ಮದುವೆ ನಂತರವೇ ಗರ್ಭಧರಿಸಬೇಕೆಂದೇನಿಲ್ಲ ಎಂದು ಹೇಳಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries