HEALTH TIPS

ಪ್ರತಿಯೊಬ್ಬ ವ್ಯಕ್ತಿಯೂ ವಿಮಾನದಲ್ಲಿ ಸಂಚರಿಸಬೇಕು, ದಿಯೋಘರ್​ ವಿಮಾನ ನಿಲ್ದಾಣ ಉದ್ಘಾಟಿಸಿ ಪ್ರಧಾನಿ ಹೇಳಿಕೆ

          ರಾಂಚಿಪ್ರತಿಯೊಬ್ಬ ಜನಸಾಮಾನ್ಯನೂ ವಿಮಾನದಲ್ಲಿ ಸಂಚರಿಸಬೇಕೆಂಬುದೇ ಕೇಂದ್ರ ಸರ್ಕಾರದ ಆಶಯವಾಗಿದ್ದು, ಈ ನಿಟ್ಟಿನಲ್ಲಿ ದೇಶೀಯ ವಿಮಾನ ಹಾರಾಟವನ್ನು ಬಲಪಡಿಸಲು ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

          ಬಹುನಿರೀಕ್ಷಿತ ದಿಯೋಘರ್​ ವಿಮಾನ ನಿಲ್ದಾಣವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಜಾರ್ಖಂಡ್​​ನಲ್ಲಿ ಇದು ಎರಡನೇ ವಿಮಾನ ನಿಲ್ದಾಣವಾಗಿದ್ದು, ಡುಮ್ಕಾ ಮತ್ತು ಬೊಕರೊದಲ್ಲಿ ಮತ್ತೆರಡು ವಿಮಾನ ನಿಲ್ದಾಣಗಳು ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.ಈ ವೇಳೆ ಕೇಂದ್ರ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಉಪಸ್ಥಿತರಿದ್ದರು.

ನಂತರ ಮಾತನಾಡಿದ ಮುಖ್ಯಮಂತ್ರಿ ಹೇಮಂತ್​ ಸೋರೆನ್, ​ಜಾರ್ಖಂಡ್​ನಲ್ಲಿ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಬೇಡಿಕೆ 2010 ರಿಂದ ಇತ್ತು, ಪ್ರಧಾನಿ ಮೋದಿ ಅವರಿಂದ ಇದು ಸಾಕಾರವಾಯಿತು ಎಂದು ಹೇಳಿದರು.

             ಇದಷ್ಟೇ ಅಲ್ಲದೇ ಜಾರ್ಖಂಡ್​ನ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ 16,000 ಕೋಟಿ ರೂ. ಯೋಜನೆಗೆ ಇದೇ ವೇಳೆ ಪ್ರಧಾನಿ ಚಾಲನೆ ನೀಡಿದರು. ಕಳೆದ 8 ವರ್ಷದಲ್ಲಿ ರಾಜ್ಯ ಹೆದ್ದಾರಿಗಳ ಅಭಿವೃದ್ಧಿ ಮಾಡಲಾಗಿದ್ದು, ಇನ್ನೂ 13 ಹೆದ್ದಾರಿಗಳ ಯೋಜನೆಗೆ ಚಾಲನೆ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries