ನಿರ್ದೇಶಕ ಅನುಪ್ ಭಂಡಾರಿ ಅವರ ಚೊಚ್ಚಲ ಚಿತ್ರ ರಂಗಿತರಂಗ ಜುಲೈ 3 ರಂದು ಏಳನೇ ವರ್ಷಕ್ಕೆ ಕಾಲಿಟ್ಟಿದೆ.
ನಾನು ಇಂದು ಏನಾಗಿರುವೆನು ಅದಕ್ಕೆಲ್ಲಾ ಏಳು ವರ್ಷಗಳ ಹಿಂದೆ ನೀವು ನಮ್ಮ ಮೇಲೆ ಹರಿಸಲು ಪ್ರಾರಂಭಿಸಿದ ಪ್ರೀತಿಯಿಂದಾಗಿ" ಎಂದು ಅನುಪ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ, ನಿಮ್ಮ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದ ಎಂದು ಹೇಳಿದ್ದಾರೆ.
ರಂಗಿತರಂಗ ಚಿತ್ರದ ಹಿಂದಿ ರಿಮೇಕ್ ಸಾಧ್ಯತೆಯ ಬಗ್ಗೆ ಹಲವು ದಿನಗಳಿಂದ ವದಂತಿ ಹರಿದಾಡುತ್ತಿವೆ. ಸದ್ಯ ಈ ವದಂತಿ ಖಚಿತವಾಗಿದೆ. ಇತ್ತೀಚಿನ ಬೆಳವಣಿಗೆಯ ಪ್ರಕಾರ, ದೊಡ್ಡ ನಿರ್ಮಾಪಕರೊಬ್ಬರು ರಂಗಿತರಂಗವನ್ನು ಹಿಂದಿಯಲ್ಲಿ ಹೊರತರಲು ಉತ್ಸುಕರಾಗಿದ್ದಾರೆ ಮತ್ತು ಮುಂಬೈನ ಕಾಪೆರ್Çರೇಟ್ ಸ್ಟುಡಿಯೋಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ನಿರ್ಮಾಪಕರು ಹಿಂದಿ ರೀಮೇಕ್ ರಂಗಿತರಂಗ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಮಾಡಲು ಬಯಸುತ್ತಿದ್ದು, ಪ್ರಮುಖ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಶಾಹಿದ್ ಕಪೂರ್ ರನ್ನು ಕರೆತರಲು ಯೋಜಿಸಿದ್ದಾರೆ.
ಕನ್ನಡ ಚಿತ್ರರಂಗದ ಅಭಿಮಾನಿಗಳಲ್ಲಿ ನೆಚ್ಚಿನ ಚಿತ್ರವಾಗಿ ಮುಂದುವರೆದಿರುವ ರಂಗಿತರಂಗ, ಅನುಪ್ ಅವರ ಸಹೋದರ ನಿರೂಪ್ ಭಂಡಾರಿ ಮತ್ತು ಆವಂತಿಕಾ ಶೆಟ್ಟಿ ಅವರ ಅಭಿನಯದ ಚೊಚ್ಚಲ ಚಿತ್ರವಾಗಿದೆ. ಚಿತ್ರದಲ್ಲಿ ರಾಧಿಕಾ ನಾರಾಯಣ್ ಮತ್ತು ಸಾಯಿ ಕುಮಾರ್ ಪ್ರಮುಖ ಪಾತ್ರ ನಿರ್ವಹಿಸಿದ್ದರು, ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಅನೂಪ್ ಭಂಡಾರಿ ಪ್ರಸ್ತುತ ವಿಕ್ರಾಂತ್ ರೋಣ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ, ನಂತರ ಸುದೀಪ್ ನಟನೆಯ ಬಿಲ್ಲಾ ರಂಗ ಬಾಷಾಕ್ಕಾಗಿ ಕೆಲಸ ಮಾಡುತ್ತಾರೆ. ಹಾಗಾಗಿ ಹಿಂದಿಯಲ್ಲಿ ರಂಗಿತರಂಗ ರೀಮೇಕ್ ಅನ್ನು ಅನುಪ್ ಭಂಡಾರಿ ನಿರ್ದೇಶಿಸುತ್ತಾರೋ ಇಲ್ಲವೋ ಎಂಬುದು ಖಚಿತವಾಗಿಲ್ಲ.