ಕಾಸರಗೋಡು: ಇದೇ ಮೊದಲಬಾರಿಗೆ ಮುಖ್ಯಮಂತ್ರಿಯೊಬ್ಬರು ದೇಶದ್ರೋಹದ ಆರೋಪದಡಿ ಸಂಶಯದ ಛಾಯೆಗೆ ಸಿಲುಕಿದ್ದು, ಸ್ವಾಭಿಮಾನವಿದ್ದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜೀನಾಮೆ ನೀಡಬೇಕು ಎಂದು ಶಾಸಕ ನೆಲ್ಲಿಕುನ್ ಆಗ್ರಹಿಸಿದರು. ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ವಿರುದ್ಧ ಹೈಕೋರ್ಟ್ ನ್ಯಾಯಾಧೀಶರ ಮೇಲ್ನೋಟದಲ್ಲಿ ಕೇಂದ್ರ ತನಿಖಾ ಏಜನ್ಸಿಗಳು ತನಿಖೆ ನಡೆಸಬೇಕು. ಮುಖ್ಯಮಂತ್ರಿ ವಿರುದ್ಧ ಕೇಂದ್ರೀಯ ಸಂಸ್ಥೆಗಳು ತನಿಖೆ ನಡೆಸಬೇಕು ಎಂದು ತಿಳಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ ಯೋಜನೆಯಿಂದ ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಯನ್ನು ಹೊರತುಪಡಿಸುವಂತೆ ಆಗ್ರಹಿಸಿ ಯುಡಿಎಫ್ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಕಲೆಕ್ಟರೇಟ್ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಕಾಲೇಜು ವಠಾರದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಮೆರವಣಿಗೆ ನಡೆಯಿತಿ. ಅಧ್ಯಕ್ಷ ಸಿ. ಟಿ ಅಹಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು ಪ್ರಧಾನ ಸಂಚಾಲಕ ಎ.ಗೋವಿಂದನ್ ನಾಯರ್ ಸ್ವಾಗತಿಸಿದರು. ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್, ಮುಸ್ಲಿಂ ಲೀಗ್ ಜಿಲ್ಲಾಧ್ಯಕ್ಷ ಟಿ.ಇ.ಅಬ್ದುಲ್ಲಾ, ಶಾಸಕ ಎ.ಕೆ.ಎಂ.ಅಶ್ರಫ್, ಜೆಟೊ ಜೋಸೆಫ್, ಹಕೀಂ ಕುನ್ನಿಲ್, ಎ.ಅಬ್ದುಲ್ ರೆಹಮಾನ್, ಹರೀಶ್ ಬಿ.ನಂಬಿಯಾರ್, ಕೆನೀಲಕಂಠನ್, ಎಂ.ಸಿ.ಖಮರುದ್ದೀನ್, ಪಿ.ಎ ಅಶ್ರಫ್ ಅಲಿ, ಕಲ್ಲಟ್ರ ಮಾಹಿನ್ ಹಾಜಿ, ಆಂಟೆಸ್ ಜೋಸೆಫ್, ಉಮೇಶನ್, ವಿಕೆಪಿ ಹಮೀದ್ ಅಲಿ, ಎಂ.ಬಿ.ಯೂಸುಫ್, ಕೆ.ಮುಹಮ್ಮದ್‍ಕುಞÂ, ಮೂಸಾ ಬಿ ಚೆರ್ಕಳ, ವಿನೋದ್ ಕುಮಾರ್ ಪಳ್ಳಯಿಲ್ ವೇದಿಕೆ, ಟಿ.ಎ.ಮೂಸಾ, ಮಂಜುನಾಥ ಆಳ್ವ, ಮುಂತಾದವರು ಉಪಸ್ಥಿತರಿದ್ದರು.