ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ರಿಮಾಂಡ್ ಆರೋಪಿ ಪರಾರಿಯಾಗಿದ್ದಾನೆ. ಗಾಂಜಾ ಪ್ರಕರಣದ ಆರೋಪಿ ಅಹಮದ್ ಕಬೀರ್ ಪೋಲೀಸರಿಂದ ತಪ್ಪಿಸಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಪರಾರಿಯಾಗಿದ್ದಾನೆ. ಆರೋಪಿಗಾಗಿ ಪೋಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಒಂದು ತಿಂಗಳ ಹಿಂದೆ ಮತ್ತೊಬ್ಬ ಆರೋಪಿ ಕೂಡ ಈ ರೀತಿ ಪರಾರಿಯಾಗಿದ್ದ. ಡ್ರಗ್ಸ್ ಪ್ರಕರಣದ ಆರೋಪಿ ಅಮೀರ್ ಅಲಿ ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಓಡಿ ಹೋಗಿದ್ದ. ಆರೋಪಿಗಳು ಪೊಲೀಸರನ್ನು ತಳ್ಳಿ ಕೈಕೋಳದೊಂದಿಗೇ ಪರಾರಿಯಾಗಿದ್ದ. ಆಲಂಪಾಡಿ ಮೂಲದ ಅಮೀರ್ ಎಂಬಾತನನ್ನು ಮತ್ತೆ ಬೆಂಗಳೂರಿನಲ್ಲಿ ಪೋಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಅಮೀರ್ ತನ್ನ ಕಾರಿನಲ್ಲಿ ಎಂಡಿಎಂಎ ಕಳ್ಳಸಾಗಣೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದ. ಪೋಲೀಸರ ನಿರ್ಲಕ್ಷ್ಯದಿಂದ ಡ್ರಗ್ಸ್ ಪ್ರಕರಣದ ಆರೋಪಿಗಳು ಪರಾರಿಯಾಗಿರುವ ಘಟನೆಯಲ್ಲಿ ಎಆರ್ ಕ್ಯಾಂಪ್ ನ ಮೂವರು ಪೋಲೀಸರೂ ಅಮಾನತುಗೊಂಡಿದ್ದರು.