ಚಪಾತಿ...ಇತ್ತೀಚೆಗೆ ಅನೇಕರ ಮನೆಯ ರಾತ್ರಿಯ ಊಟದಲ್ಲಿ ಚಪಾತಿ ಅನ್ನೋ ಆಹಾರ ಇದ್ದೆ ಇರುತ್ತದೆ. ಆರೋಗ್ಯದ ಕಾರಣಕ್ಕೋ ಅಥವಾ ಸಾಮಾನ್ಯವಾಗೋ ಗೊತ್ತಿಲ್ಲ ಭಾರತದಲ್ಲಿ ಅನೇಕರು ಚಪಾತಿಯ ಮೊರೆ ಹೋಗುತ್ತಿದ್ದಾರೆ. ಅದರಲ್ಲೂ, ಅನೇಕರ ಮನೆಯಲ್ಲಿ ಏನಾಗುತ್ತಿದೆ ಅಂದರೆ, ಚಪಾತಿ ಇಲ್ಲದೇ ಊಟವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಆಗಿ ಬಿಟ್ಟಿದೆ.
ಬಡವ, ಶ್ರೀಮಂತ ಎನ್ನದೆ ಗೋಧಿಯಿಂದ ತಯಾರಿಸುವ ಚಪಾತಿಯನ್ನು ತಿನ್ನುತ್ತಾರೆ. ಚಪಾತಿಗೆ ಕೊಂಚ ಪಲ್ಯ ಹಾಕಿ ತಿಂದರೆ ಅದರ ಮಜಾವೇ ಬೇರೆ. ಮಕ್ಕಳಿಗೆ ಚಪಾತಿಯ ರೋಲ್ ಮಾಡಿ ಕೊಡುವುದುಂಟು. ಒಂದಲ್ಲ ಒಂದು ರೀತಿಯಲ್ಲಿ ಭಾರತದಲ್ಲಿ ಚಪಾತಿ ಸುಪ್ರಸಿದ್ಧವಾಗಿದೆ. ಆದರೆ ನಿಮಗೊಂದು ಗೊತ್ತಾ? ಚಪಾತಿಯಿಂದ ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳಿದೆ ಎನ್ನುವುದು? ಉತ್ತಮ ಆರೋಗ್ಯದ ಜೊತೆಗೆ ಚಪಾತಿಯಿಂದ ತೂಕ ಕೂಡ ಇಳಿಸಬಹುದಾಗಿದೆ.
ಹಾಗಾದರೆ ದಿನಕ್ಕೆ ಎಷ್ಟು ಚಪಾತಿ ತಿನ್ನಬೇಕು? ಈ ಚಪಾತಿ ತಿನ್ನುವುದರಿಂದ ತೂಕ ಇಳಿಯುತ್ತದಾ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.
ಚಪಾತಿಯಲ್ಲಿರುವ ಪೌಷ್ಟಿಕಾಂಶದ ಬಗ್ಗೆ ಮಾಹಿತಿ!
ಚಪಾತಿಯಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಮ್ಯಾಗ್ನೀಸ್, ಸಿಲಿಕಾನ್, ಪೊಟ್ಯಾಷಿಯಮ್, ಕ್ಯಾಲ್ಸಿಯಂ ಮತ್ತು ಇನ್ನಿತರ ಅಂಶಗಳಿವೆ. ಈ ಅಂಶಗಳು ಮನುಷ್ಯನ ದೇಹಕ್ಕೆ ಸೇರುವುದರಿಂದ ಆತ ಆರೋಗ್ಯದಿಂದಿರಲು ಸಹಕರಿಸುತ್ತದೆ.
ಇನ್ನು ಚಪಾತಿ ನೀರಿನಲ್ಲಿ ಕರಗುವ ಆಹಾರ ಪದಾರ್ಥವಾಗಿದೆ. ಹೀಗಾಗಿ ರಕ್ತದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು, ಮಲಬದ್ಧತೆಯನ್ನು ತಡೆಯಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸಲು ಇದು ಸಹಾಯ ಮಾಡುತ್ತದೆ.
ಇನ್ನು ಚಪಾತಿಯಲ್ಲಿ ಸಿಗುವ ಕಾರ್ಬೋಹೈಡ್ರೇಟ್ ಗಳು ನಮ್ಮನ್ನು ಶಕ್ತಿವಂತರಾಗಿಸುತ್ತದೆ. ಅಲ್ಲದೇ ನಿಮ್ಮನ್ನು ಹಲವು ಗಂಟೆಗಳ ಕಾಲ ಸಕ್ರಿಯವಾಗಿರಿಸುತ್ತದೆ. ಇನ್ನು ಮನುಷ್ಯನ ದೇಹಕ್ಕೆ ಶಕ್ತಿ ಕೊಡುವ ಕ್ಯಾಲೋರಿಗಳು ಚಪಾತಿಯಿಂದಲೂ ಸಿಗುತ್ತದೆ.
ಒಂದು ಚಪಾತಿಯಲ್ಲಿ ಸುಮಾರು 71 ಕ್ಯಾಲೋರಿಗಳು ಮನುಷ್ಯನ ದೇಹಕ್ಕೆ ಸಿಗುತ್ತದೆ. ಇನ್ನು ಸ್ಕಿನ್‌ಗೂ ಗೋಧಿ ಬೇಕು. ಇದರಲ್ಲಿರುವ ಸತು ಮತ್ತು ಇನ್ನಿತರ ಅಂಶಗಳು ಸ್ಕಿನ್ ಆರೋಗ್ಯದಿಂದ ಇರಲು ಸಹಕರಿಸುತ್ತದೆ. ಇದರಿಂದ ಸ್ಕಿನ್ ಗ್ಲೋ ಆಗುತ್ತದೆ.
ಚಪಾತಿಯಿಂದ ತೂಕ ಕಡಿಮೆ ಆಗುತ್ತಾ?
ಚಪಾತಿಯ ಪೌಷ್ಟಿಕಾಂಶಗಳು ಫಿಟ್ ಆಗಿರಲು ಸಹಕರಿಸುತ್ತದೆ. ಅಲ್ಲದೆ ಹೆಚ್ಚು ಸುಸ್ತು, ಆಯಾಸ ಉಂಟಾಗುವುದಿಲ್ಲ. ಹೌದು ಚಪಾತಿಯಲ್ಲಿ ಸಿಗುವ ಕ್ಯಾಲೋರಿಗಳಿಂದ ಮನುಷ್ಯ ಫಿಟ್ ಆಗಿರಬಹುದು.
ಅಂದರೆ ಚಪಾತಿಯಲ್ಲಿ ಸರಿ ಸುಮಾರು 71 ಕ್ಯಾಲೋರಿಗಳು ಇರುತ್ತದೆ. ಆಗ ನಾವು ನಮ್ಮ ದೇಹಕ್ಕೆ ಎಷ್ಟು ಕ್ಯಾಲೋರಿ ಬೇಕು ಎನ್ನುವುದನ್ನು ಲೆಕ್ಕ ಹಾಕಿ ಚಪಾತಿ ಸೇವಿಸಬೇಕು. ನಿರ್ದಿಷ್ಟವಾಗಿ ಚಪಾತಿ ಸೇವಿಸಿದರೆ ತೂಕ ಇಳಿಯುತ್ತದೆ. ಅನ್ನಕ್ಕಿಂತ ದಿನ ನಿತ್ಯ ಎರಡು ಚಪಾತಿ ಅದರೊಂದಿಗೆ ತರಕಾರಿ, ಹಣ್ಣು ತಿಂದರೆ ಫಿಟ್ ಆಗಿರಬಹುದು.
ಇನ್ನು ಚಪಾತಿಯಲ್ಲಿ ಕಾರ್ಬೋಹೈಡ್ರೇಟ್ ಕೂಡ ನಿಮ್ಮ ದೇಹ ಸದೃಢವಾಗಲೂ ಸಹಾಯ ಮಾಡುತ್ತದೆ. ಇನ್ನು ಇದಲ್ಲದೇ ಇಡೀ ಗೋಧಿಯಿಂದ ತಯಾರಿಸಿದಂತಹ ಒಂದು ಚಪಾತಿಯಲ್ಲಿ 0.4 ಗ್ರಾಂ ನಾರಿನಾಂಶವಿದೆ. ತೂಕ ಇಳಿಸಲು ಬಯಸುವವರು ಹೆಚ್ಚಾಗಿ ನಾರಿನಾಂಶವು ಇರುವ ಆಹಾರ ಸೇವನೆ ಮಾಡಬೇಕು.
ಇದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಚಯಾಪಚಯವು ಹೆಚ್ಚಾಗುವುದು. ಈ ಮೂಲಕ ತೂಕವು ಏರುವುದು ಇಲ್ಲ.
ತೂಕ ಇಳಿಸುವವವರು ಎಷ್ಟು ಚಪಾತಿ ನಿತ್ಯ ತಿನ್ನಬೇಕು?
ದಿನಕ್ಕೆ ಸುಮಾರು ಮೂರರಿಂದ ನಾಲ್ಕು ಚಪಾತಿ ಸೇವಿಸಿದರೆ ತೂಕ ಇಳಿಸಲು ಉತ್ತಮ ಡಯಟ್ ಎನ್ನುವುದು ಫಿಟ್ ನೆಸ್ ಮಾಸ್ಟರ್ ಗಳು ಅಭಿಪ್ರಾಯ. ಕಾರ್ಬೋಹೈಡ್ರೇಟ್ ಹಾಗೂ ಕ್ಯಾಲೋರಿಸ್ ಸಮತೋಲನದಲ್ಲಿ ಇಡಲು ಮೂರರಿಂದ ನಾಲ್ಕು ಚಪಾತಿ ಉತ್ತಮವಂತೆ. ಅದರಲ್ಲೂ ಚಪಾತಿಯನ್ನು ಹೆಚ್ಚು ಆರೋಗ್ಯಕಾರಿಯಾಗಿಸಬೇಕಿದ್ದರೆ ಆಗ ನೀವು ಅದಕ್ಕೆ ಓಟ್ಸ್, ಬಾದಾಮಿ, ಜೋಳ ಮತ್ತು ರಾಗಿ ಹಿಟ್ಟು ಹಾಕಿ. ಕಡಿಮೆ ಪ್ರಮಾಣದಲ್ಲಿ ಈ ಆಹಾರ ಪದಾರ್ಥಗಳನ್ನು ಸೇರ್ಪಡೆ ಮಾಡಿ. ಇದು ಬಲು ಉತ್ತಮವಂತೆ. ಇನ್ನು ತೂಕ ಇಳಿಸುವ ಯೋಚನೆಯಲ್ಲಿದ್ದರೆ ಚಪಾತಿಗೆ ಬೆಣ್ಣೆ ಅಥವಾ ತುಪ್ಪ ಹಾಕಬೇಡಿ. ಹಾಲಿನ ಕೊಬ್ಬು ಬಳಸಬೇಡಿ ಎನ್ನುತ್ತಾರೆ ಪರಿಣಿತರು.