ಕಾಸರಗೋಡು: ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಹೊಳೆಗಳು ತುಂಬಿ ಹರಿಯುತ್ತಿದೆ. ಶಿರಿಯ, ಕುಂಬಳೆ ಹೊಳೆಗಳು ಭರ್ತಿಯಾಗಿದೆ. ಬಂಬ್ರಾಣ, ಪರಂಕಿಲ, ಮಂಗಲ್ಪಾಡಿ ಸೇರಿದಂತೆ ಬಯಲು ಪ್ರದೇಶದಲ್ಲಿ ನೀರು ತಿಂಬಿಕೊಂಡಿದೆ. ಸಮುದ್ರದಲ್ಲಿ ಬೃಹತ್ ಅಲೆಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದ್ದು, ಕರಾವಳಿ ಪ್ರದೇಶದ ಜನತೆ ಮತ್ತು ಮೀನುಗಾರರು ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ಮಲೆನಾಡು ಪ್ರದೇಶದಲ್ಲೂ ಬಿರುಸಿನ ಮಳೆ ಮುಂದುವರಿದಿದೆ. ಕಾಸರಗೋಡು ಅಣಂಗೂರು ತುರ್ತಿ ಎಂಬಲ್ಲಿ ಮಹಮ್ಮದ್‍ಕುಞÂ ಅವರ ಮನೆ ಎದುರು ನಿಲ್ಲಿಸಿದ್ದ ಕಾರಿನ ಮೇಲೆ ತೆಂಗಿನ ಮರ ವುರುಳಿ ಕಾರು ಜಖಂಗೊಂಡಿದೆ.
665.17 ಹೆಕ್ಟೇರ್ ಕೃಷಿ:
ಜಿಲ್ಲೆಯಲ್ಲಿ ಏಪ್ರಿಲ್ 1ರಿಂದ ಜುಲೈ 8ರವರೆಗೆ ಮಳೆಯಿಂದಾಗಿ 13,828 ರೈತರು ಬೆಳೆ ಹಾನಿ ಅನುಭವಿಸಿದ್ದು, ಒಟ್ಟು 665.17 ಹೆಕ್ಟೇರ್ ಬೆಳೆ ನಾಶವಾಗಿದೆ. 1586.53 ಲಕ್ಷ ರೂ.ಮೊತ್ತದ ಹಾನಿಯುಂಟಾಗಿದೆ ಎಂದು ಪ್ರಧಾನ ಕೃಷಿ ಅಧಿಕಾರಿ ಆರ್.ವೀಣಾರಾಣಿ ಮಾಹಿತಿ ನೀಡಿದ್ದಾರೆ.
5147 ತೆಂಗಿನಮರಗಳು(257.37 ಲಕ್ಷ ರೂ.), 1167 ತೆಂಗಿನ ಸಸಿಗಳು (35.01 ಲಕ್ಷ), 77015 ಬಾಳೆಗಿಡ (462.09 ಲಕ್ಷ), 8618 ಟ್ಯಾಪಿಂಗ್ ರಬ್ಬರ್ ಮರಗಳು (86172.36 ಲಕ್ಷ) 26829ಅಡಕೆ ಮರಗಳು(80-49ಲಕ್ಷ)ಸೇರಿದಂತೆ ಭಾರಿ ಪ್ರಮಾಣದಲ್ಲಿ ಕೃಷಿನಾಶ ಉಂಟಾಗಿದೆ.