ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಜು. 21ರಂದು ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದ ಚುನಾವಣಾ ಸಾಮಗ್ರಿಗಳನ್ನು ವಿತರಿಸಲಾಯಿತು. ಜಿಲ್ಲೆಯ ಐದು ಸ್ಥಳೀಯಾಡಳಿತ ಂಸ್ಥೆಗಳಲ್ಲಿ ತೆರವಾಗಿರುವ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ. ಕಾಞಂಗಾಡ್ ನಗರಸಭೆಯ 11ನೇ ವಾರ್ಡ್ ತೋಯಮಾಲ್, ಕಲ್ಲಾರ್ ಪಂಚಾಯಿತಿ 2ನೇ ವಾರ್ಡ್ ಅಡ್ಕಂ, ಪಳ್ಳಿಕ್ಕರ ಪಂಚಾಯಿತಿಯ 19ನೇ ವಾರ್ಡ್ ಪಲ್ಲಿಪುಳ, ಬದಿಯಡ್ಕ ಪಂಚಾಯಿತಿ 14ನೇ ವಾರ್ಡ್ ಪಟ್ಟಾಜೆ ಮತ್ತು ಕುಂಬಳೆ ಪಂಚಾಯಿತಿಯ 14ನೇ ವಾರ್ಡ್ ಪೆರ್ವಾಡ್ ನಲ್ಲಿ ಉಪಚುನಾವಣೆ ನಡೆಯಲಿದೆ.
ಜುಲೈ 20 ಮತ್ತು 21 ರಂದು ಮತಗಟ್ಟೆಗಳೆಂದು ಗೊತ್ತುಪಡಿಸಿದ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದ್ದು, 21 ರಂದು ಈ ವಾರ್ಡ್‍ಗಳಲ್ಲಿನ ಸರ್ಕಾರಿ ಕಚೇರಿಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಮತದಾನ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ನಡೆಯಲಿದೆ. ಜುಲೈ 22 ರಂದು ಬೆಳಗ್ಗೆ 10ಕ್ಕೆ ಮತ ಎಣಿಕೆ ಆರಂಭವಾಗಲಿದೆ. 24ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ಕೋವಿಡ್ ನಿಯಮಾನುಸಾರ ಚುನಾವಣೆ ನಡೆಸಲು ಸೂಚನೆ ನೀಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಿಂದ ಅಗತ್ಯ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ವಿತರಿಸಿರುವುದಾಗಿ ಪ್ರಕಟಣೆ ತಿಳಿಸಿದೆ.