ಕಾಸರಗೋಡು: ರಾಷ್ಟ್ರೀಯ ವಾಚನಾ ಮಾಸಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಸಂಘಟನಾ ಸಮಿತಿಯ ನೇತೃತ್ವದಲ್ಲಿ ವಾಚನ ದಿನಾಚರಣೆ ಹಾಗೂ ರಾಷ್ಟ್ರೀಯ ವಾಚನ ಮಾಸ ಆಚರಣೆಯ ಸಮಾರೋಪ ಸಮರಂಭ ಜು. 18ರಂದು ಕಾಞಂಗಾಡಿನಲ್ಲಿ ಜರುಗಲಿದೆ.
ಜಿಲ್ಲಾ ಮಟ್ಟದ ಸಂಘಟನಾ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜು ಸಾಹಿತ್ಯ ವೇದಿಕೆ ಹಾಗೂ ಪಿ.ಎನ್.ಪಣಿಕರ್ ಪ್ರತಿಷ್ಠಾನ ವತಿಯಿಂದ ಕಾರ್ಯಕ್ರಮ ಜರುಗಲಿದೆ. ಪಡನ್ನಕ್ಕಾಡ್ ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಮ್ಮೇಳನ ಸಭಾಂಗಣದಲ್ಲಿ ಸಮಾರಂಭ ನಡೆಯುವುದು. ಖ್ಯಾತ ಸಾಹಿತಿ ಸಿ.ವಿ.ಬಾಲಕೃಷ್ಣನ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಉದ್ಘಾಟಿಸುವರು. ನೆಹರು ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ.ಕೆ.ವಿ.ಮುರಳಿ.ಅಧ್ಯಕ್ಷತೆ ವಹಿಸುವರು. ಕಣ್ಣೂರು ವಿಶ್ವವಿದ್ಯಾಲಯದ ಮಾಜಿ ಪರೀಕ್ಷಾ ನಿಯಂತ್ರಕ ಪೆÇ್ರ.ಕೆ.ಪಿ.ಜಯರಾಜನ್ ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂದನನ್ ಅವರು ರಾಷ್ಟ್ರೀಯ ವಾಚನಾ ಮಾಸದ ಅವಲೋಕನ ನಡೆಸುವರು. ಕೆ.ವಿ.ರಾಘವನ್ ಅವರು ಪಿ.ಎನ್.ಪಣಿಕ್ಕರ್ ಸಂಸ್ಮರಣೆ ನಡೆಸುವರು.