ತಿರುವನಂತಪುರ: ಜನಪಕ್ಷದ ನಾಯಕ ಪಿ.ಸಿ.ಜಾರ್ಜ್ ವಿರುದ್ಧ ಪೋಲೀಸರು ಮತ್ತೆ ಪ್ರಕರಣ ದಾಖಲಿಸಿದ್ದಾರೆ. ಮಹಿಳಾ ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ದೂರಿನ ಮೇರೆಗೆ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ರಕರ್ತರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಸೋಲಾರ್ ಪ್ರಕರಣದ ಆರೋಪಿಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದ ನಂತರ ಹೊಸ ಪ್ರಕರಣ ಇದೀಗ ಮತ್ತೊಂದು ದಾಖಲಾದಂತಾಗಿದೆ.
ಸೋಲಾರ್ ಪ್ರಕರಣದ ಆರೋಪಿತೆ ದಾಖಲಿಸಿದ್ದ ಕಿರುಕುಳ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಹೊರಬಂದ ಪಿಸಿ ಜಾರ್ಜ್ ಅವರನ್ನು ಮಾಧ್ಯಮದವರು ಸುತ್ತುವರೆದಿದ್ದರು. ಈ ನಡುವೆ ಕಿರುಕುಳಕ್ಕೆ ಒಳಗಾದ ಮಹಿಳೆಯ ಹೆಸರು ಹೇಳಿದ್ದು ತಪ್ಪಾ ಎಂದು ಮಾಧ್ಯಮ ಕಾರ್ಯಕರ್ತೆ ಪ್ರಶ್ನಿಸಿದ್ದರು. ಅವರ ಹೆಸರು ಹೇಳುವ ಬದಲು ನಿಮ್ಮ ಹೆಸರನ್ನು ಹೇಳಲು ಬಯಸುತ್ತೀರಾ ಎಂದು ಪಿಸಿ ಜಾರ್ಜ್ ಕೇಳಿದ್ದು ಈ ಸಂಬಂಧ ಪ್ರಕರಣ ಇದೀಗ ದಾಖಲಾಗಿದೆ.
ಪಿಸಿ ಜಾರ್ಜ್ ಸ್ತ್ರೀತ್ವಕ್ಕೆ ಅವಮಾನವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ ಎಂದು ಪತ್ರಕರ್ತೆಯ ದೂರಿಕೊಂಡಿದ್ದಾಳೆ. ದೂರಿನ ಮೇರೆಗೆ ಮ್ಯೂಸಿಯಂ ಪೋಲೀಸರು ಐಪಿಸಿ ಸೆಕ್ಷನ್ 509 ರ ಅಡಿಯಲ್ಲಿ ಮಹಿಳೆಯನ್ನು ಅವಮಾನಿಸಿದ ಪ್ರಕರಣವನ್ನು ದಾಖಲಿಸಿದ್ದಾರೆ. ಇದೇ ವೇಳೆ ಸರ್ಕಾರವನ್ನು ಪ್ರಶ್ನಿಸಿದ್ದಕ್ಕೆ ಆಡಳಿತ ವ್ಯವಸ್ಥೆ ನಿರಂತರವಾಗಿ ಪಿಸಿ ಜಾರ್ಜ್ ಅವರನ್ನು ಪ್ರಕರಣದಲ್ಲಿ ಸಿಲುಕಿಸುತ್ತಿದೆ ಎಂಬ ಟೀಕೆಗಳೂ ಇವೆ.