ತಿರುವನಂತಪುರ: ರಾಜ್ಯದಲ್ಲಿ ಮುಂಗಾರು ಮಳೆ ವ್ಯಾಪಕವಾಗಿದ್ದು, ಜೊತೆಗೆ ಸಾಂಕ್ರಾಮಿಕ ಜ್ವರ ಹರಡುತ್ತಿದೆ. ಎರಡು ದಿನಗಳಲ್ಲಿ 28,643 ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಮೂರನೇ ಒಂದು ಭಾಗದಷ್ಟು ಪ್ರಕರಣಗಳು ಉತ್ತರದÀ ಜಿಲ್ಲೆಗಳಲ್ಲಿ ವರದಿಯಾಗಿವೆ. ಮಲಪ್ಪುರಂ ಜಿಲ್ಲೆಯೊಂದರಲ್ಲೇ 2243 ಮಂದಿ ಜ್ವರಕ್ಕೆ ತುತ್ತಾಗಿದ್ದಾರೆ.
ರಾಜ್ಯದಲ್ಲಿ ನಿನ್ನೆ 12 ಚಿಕನ್ ಗುನ್ಯಾ ಪ್ರಕರಣಗಳು ವರದಿಯಾಗಿವೆ. ಎರ್ನಾಕುಳಂನಲ್ಲಿ 19 ಮಂದಿಗೆ ಡೆಂಗ್ಯೂ ಜ್ವರ ಇರುವುದು ದೃಢಪಟ್ಟಿದೆ. ವಯನಾಡಿನಲ್ಲಿ ನಿನ್ನೆ ಏಳು ಮಂದಿಗೆ ಇಲಿ ಜ್ವರ ದೃಢಪಟ್ಟಿತ್ತು.
ನಿನ್ನೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸಾಂಕ್ರಾಮಿಕ ಜ್ವರದ ವಿರುದ್ಧ ನಿಗಾ ವಹಿಸುವಂತೆ ಸೂಚಿಸಿದ್ದರು. ಕೊರೋನಾ, ಡೆಂಗ್ಯೂ ಜ್ವರ, ಇಲಿ ಜ್ವರ, ಮಲೇರಿಯಾ, ಚಿಕೂನ್‍ಗುನ್ಯಾ, ಚಿಗಟೆ ಜ್ವರ, ಎಚ್1ಎನ್1, ಚಿಕನ್ ಗುನ್ಯಾ, ಝಿಕಾ, ಮಂಗನ ಜ್ವರ, ಜಪಾನೀಸ್ ಜ್ವರ ಮುಂತಾದವು ಜ್ವರದ ಲಕ್ಷಣಗಳಾಗಿದ್ದು, ಸ್ವಯಂ ಚಿಕಿತ್ಸೆ ಮಾಡದೆ ವೈದ್ಯರ ಬಳಿ ಚಿಕಿತ್ಸೆ ಪಡೆಯಬೇಕು ಎಂದು ಸಚಿವರು ಸೂಚಿಸಿದರು. . ಡೆಂಗ್ಯೂ ಜ್ವರ, ಇಲಿ ಜ್ವರ ಮುಂತಾದವುಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಆರೋಗ್ಯ ಸಚಿವರು ಸೂಚಿಸಿರುವರು.