HEALTH TIPS

ಇಂಥಾ ಆಹಾರಗಳನ್ನು ಎಂದಿಗೂ ಮಕ್ಕಳ ಲಂಚ್‌ಬಾಕ್ಸ್‌ಗೆ ಕೊಡಲೇಬೇಡಿ

Top Post Ad

Click to join Samarasasudhi Official Whatsapp Group

Qries

 ಮಕ್ಕಳ ಆಹಾರದ ವಿಚಾರಕ್ಕೆ ಬಂದರೆ ಹಿಂದಿನ ಕಾಲದ ಪೋಷಕರಂತೆ ಈಗಿನ ಪೋಷಕರು ರಿಸ್ಕ್‌ ತೆಗೆದುಕೊಳ್ಳುವುದಿಲ್ಲ. ಅವರಿಗೆ ಬೆಳಗ್ಗೆಯೇ ಬ್ರೇಕ್‌ಫಾಸ್ಟ್‌, ಲಂಚ್‌ ಬಾಕ್ಸ್‌ ಎಲ್ಲವನ್ನು ರೆಡಿ ಮಾಡಲು ಅಲಸ್ಯ ಪಡುವ ಬಹುತೇಕ ಅಮ್ಮಂದಿರು ಅವಸರದಲ್ಲಿ ರೆಡಿಮೇಡ್‌ ಫುಡ್‌ಗಳ ಮೊರೆ ಹೋಗುತ್ತಾರೆ.

ಹಿಂದೆ ಆರೋಗ್ಯಕರ ಬ್ರೇಕ್‌ಫಾಸ್ಟ್‌, ಸೊಪ್ಪು, ತರಕಾರಿ ಪಲ್ಯಗಳು, ಪೌಷ್ಟಿಕ ಖಾದ್ಯಗಳನ್ನು ಸಿದ್ಧಪಡಿಸುತ್ತಿದ್ದರು, ಅದಕ್ಕೆಲ್ಲಾ ಈಗ ಸಮಯವೇ ಇಲ್ಲವಾಗಿದೆ ವರ್ಕಿಂಗ್‌ ಅಮ್ಮಂದಿರಿಗೆ. ಅನೇಕ ಬಾರಿ ಅವಸರದಲ್ಲಿ ಚಿಪ್ಸ್, ಮ್ಯಾಗಿ, ರೆಡಿಮೇಡ್ ಕೇಕ್‌ಗಳು ಮತ್ತು ಸಲಭವಾಗಿ ತಯಾರಿಸಬಹುದಾದ ಇತರ ಖಾದ್ಯಗಳನ್ನು ಪ್ಯಾಕ್ ಮಾಡುತ್ತಾರೆ. ಆದರೆ ಈ ಸಿದ್ಧ ಆಹಾರಗಳು ಎಷ್ಟು ಅನಾರೋಗ್ಯಕರ, ಮಕ್ಕಳ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ, ಮಕ್ಕಳ ಆಹಾರದಲ್ಲಿ ಇಂಥಾ ಅಲಸ್ಯ ಎಷ್ಟು ತಪ್ಪು ಮುಂದೆ ನೋಡೋಣ:

ಆಲೂಗಡ್ಡೆ ಚಿಪ್ಸ್

ಅಂಗಡಿಗಳಲ್ಲಿ ಸಿಗುವ ಆಲೂಗಡ್ಡೆ ಚಿಪ್ಸ್‌ನಲ್ಲಿ ಹೆಚ್ಚಿನ ಉಪ್ಪು ಮತ್ತು ಕಡಿಮೆ ಗುಣಮಟ್ಟದ ಎಣ್ಣೆಯನ್ನು ಬಳಸಲಾಗುತ್ತದೆ. ಈ ಚಿಪ್ಸ್ ಟ್ರಾನ್ಸ್ ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಅಧಿಕವಾಗಿರುತ್ತದೆ. ಅದೇ ಸಮಯದಲ್ಲಿ, ಅದರ ಅತಿಯಾದ ಸೇವನೆಯಿಂದ ಮಧುಮೇಹದ ಅಪಾಯವೂ ಇದೆ. ಆದ್ದರಿಂದ ಮಕ್ಕಳು ಊಟದ ಬಾಕ್ಸ್‌ ಸಿದ್ಧಪಡಿಸುವಾಗ ಬಹಳ ಚಿಂತನಾಶೀಲವಾಗಿ ಪ್ಯಾಕ್ ಮಾಡಬೇಕು.

ರೆಡಿಮೇಡ್ ಸ್ಯಾಂಡ್‌ವಿಚ್‌

ನೀವು ತುಂಬಾ ಪ್ರೀತಿಯಿಂದ ಪ್ಯಾಕ್ ಮಾಡುವ ಮಕ್ಕಳ ಊಟದ ಡಬ್ಬಿಗಳಲ್ಲಿ ಅನೇಕ ರೀತಿಯ ಅನಾರೋಗ್ಯಕರ ಆಹಾರಗಳು ಸೇರಿಬಿಡುತ್ತದೆ. ಅಂಥಾ ಆಹಾರಗಳಲ್ಲಿ ಒಂದು ಈ ಸ್ಯಾಂಡ್‌ವಿಚ್‌. ಅದರಲ್ಲೂ ರೆಡಿಮೇಡ್‌ ಸ್ಯಾಂಡ್‌ವಿಚ್‌ಗಳು, ಕಾರಣ ಇದರಲ್ಲಿ ಸಬ್-ಸ್ಟಾಂಡರ್ಡ್ ಮೇಯನೇಸ್ ಮತ್ತು ಫಿಲ್ಲಿಂಗ್ ಅನ್ನು ಬಳಸಲಾಗುತ್ತದೆ, ಇದರಲ್ಲಿ ನೈಟ್ರಸ್ ಮತ್ತು ಹೆಚ್ಚುವರಿ ಸೋಡಿಯಂನಂತಹ ಅನೇಕ ರೀತಿಯ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಈ ಸ್ಯಾಂಡ್‌ವಿಚ್‌ಗಳನ್ನು ಸಂರಕ್ಷಿಸಲು ಅನೇಕ ರಾಸಾಯನಿಕಗಳನ್ನು ಸಹ ಬಳಸಲಾಗುತ್ತದೆ, ಇದು ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚೆಗೆ ಮನೆಗಳಲ್ಲಿ ತಯಾರಿಸುವ ಸ್ಯಾಂಡವಿಚ್‌ಗಳಲ್ಲೂ ಸಹ ಅದರ ರುಚಿ ಹೆಚ್ಚಿಸಲು ಮೇಯನೀಸ್‌ ಸೇರಿದಂತೆ ಕೆಲವು ರಾಸಾಯನಿಕಗಳನ್ನು ಬಳಸುತ್ತಿದ್ದೇವೆ ಅಲ್ಲವೇ, ಇದು ಆರೋಗ್ಯಕ್ಕೆ ಹಾನಿಕರ.

ಶಕ್ತಿವರ್ಧಕ ಪಾನೀಯ

ನೀವು ಮಕ್ಕಳಿಗೆ ಆರೋಗ್ಯಕರ ಆಹಾರ ನೀಡುತ್ತಿದ್ದೀರಿ ಎಂದು ಭಾವಿಸಿದರೂ ಸಿದ್ಧ ಜ್ಯೂಸ್‌ಗಳು ಖಂಡಿತ ಆರೋಗ್ಯಕರವಲ್ಲ. ಇದು ಅವರ ಆರೋಗ್ಯವನ್ನು ಹಲವಾರು ರೀತಿಯಲ್ಲಿ ಹಾಳುಮಾಡುತ್ತದೆ. ಈ ಎನರ್ಜಿ ಡ್ರಿಂಕ್ಸ್ ಕೆಫೀನ್ ಮತ್ತು ಸಕ್ಕರೆಯನ್ನು ಮಾತ್ರ ಒಳಗೊಂಡಿದೆ, ಅಲ್ಲದೆ ಇದಕ್ಕೆ ದೀರ್ಘಕಾಲ ಫ್ರೆಶ್‌ ಇರಲು ಕೆಲವು ರಾಸಾಯನಿಕಗಳನ್ನು ಸಹ ಬಳಸುತ್ತಾರೆ, ಇದು ಮಕ್ಕಳ ಸ್ಥೂಲಕಾಯತೆಯನ್ನು ಮಾತ್ರ ಹೆಚ್ಚಿಸುತ್ತದೆ ಮತ್ತು ಯಾವುದೇ ಪ್ರಯೋಜನವನ್ನು ನೀಡುವುದಿಲ್ಲ.

ಕೇಕ್

 ಕೇಕ್‌ನಲ್ಲಿ ಟ್ರಾನ್ಸ್ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿದೆ. ಟ್ರಾನ್ಸ್ ಕೊಬ್ಬು ಹೃದಯದ ಕಾಯಿಲೆಗಳಿಗೆ ಕಾರಣವಾಗಬಹುದು. ಆದುದರಿಂದ ಮಕ್ಕಳಿಗೆ ಊಟಕ್ಕೆ ಅಥವಾ ಸ್ನಾಕ್ಸ್‌ ಬಾಕ್ಸ್‌ಗೆ ಕೇಕ್‌ ಕೊಡುವ ಮುನ್ನ ಖಂಡಿತ ಒಮ್ಮೆ ಯೋಚಿಸಿ.





Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries