ಬದಿಯಡ್ಕ: ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಪ್ರೌಢ ಶಾಲೆಯಲ್ಲಿ 2021-22ನೇ ಶೈಕ್ಷಣಿಕ ವರ್ಷದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಗಳಿಸಿದ ವಿದ್ಯಾರ್ಥಿಗಳಾದ ಶಿವಾನಿ.ಜಿ , ಪ್ರತೀಕ್ಷ ಎ. ಎಸ್, ಆಶ್ರಿತ್, ಅರ್ಚನಾ, ಅನನ್ಯ ರೈ, ಅಭಿಜ್ಞಾ ಬಿ., ಭವಾನಿ ಹಾಗೂ 9 ವಿಷಯಗಳಲ್ಲಿ ಎ ಪ್ಲಸ್ ಗಳಿಸಿದಂತಹ ವಂದನ ಕೆ, ರಾಜಲಕ್ಷ್ಮಿಕೆ., ದುರ್ಗಾಶ್ರೀ, ದಿವ್ಯಶ್ರೀ ಎ., ಚೇತನ್ ರಾಜ್ ಕೆ. ಯು. ಹಾಗೂ ಆಯಿಷಾತ್ ಸರ್ಫೀನ. ಎ, ಇವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ದಿಂದ ತಮ್ಮ ಮಹಾಪ್ರಬಂಧಕ್ಕಾಗಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಶಾಲಾ ಹಿಂದಿ ಅಧ್ಯಾಪಕ ಗೋವಿಂದರಾಜ ಕೆ. ಇವರನ್ನು ಸನ್ಮಾನಿಸಲಾಯಿತು. ಭಾರತ ಸ್ಕೌಟ್ ಅಂಡ್ ಗೈಡ್ಸ್ ನಲ್ಲಿ ರಾಜ್ಯ ಪುರಸ್ಕಾರವನ್ನು ಹಾಗೂ ರಾಜ್ಯಮಟ್ಟದ ತ್ರೋಬಾಲ್‍ನಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. ಶಾಲಾ ಅಧ್ಯಾಪಕ ಅಧ್ಯಾಪಕೇತರ ವೃಂದ ನೀಡಿದ ಫಲಕಗಳ ಜೊತೆಗೆ ಹಳೆ ವಿದ್ಯಾರ್ಥಿಗಳಾದ ಇದೀಗ ಉದ್ಯೋಗ ನಿರತರಾಗಿರುವ ಪ್ರಸನ್ನ ವೆಂಕಟೇಶ್ ಕಂಡೆತ್ತೋಡಿ ಅವರ ಪುತ್ರ ಕೆ ರಾಮಕೃಷ್ಣ, ಡಾ. ಉಪ್ಪಂಗಳ ಶಂಕರನಾರಾಯಣ ಭಟ್ ಹಾಗೂ ದಿವಂಗತ ಮಾಳಿಗೆ ಮನೆ ಭಾಗಿರಥಿ ಅಮ್ಮ ನವರ ಸ್ಮರಣಾರ್ಥ ಮಕ್ಕಳಾದ ರುಕ್ಮಿಣಿ ಹಾಗೂ ಇತರರು ಮತ್ತು ಮಾಜಿ ಪಿಟಿಎ ಅಧ್ಯಕ್ಷ್ದ ಶ್ರೀಪತಿ ಎಂ ಕೊಡ ಮಾಡಿದ ನಗದು ಬಹುಮಾನವನ್ನು ವಿತರಿಸಲಾಯಿತು.
ಶಾಲಾ ವಿದ್ಯಾರ್ಥಿನಿಯರು ಕಾರ್ಯಕ್ರಮಕ್ಕೆ ಪ್ರಾರ್ಥನೆಯನ್ನು ಹಾಡಿದರು. ವ್ಯವಸ್ಥಾಪಕ ನಾರಾಯಣ ಶರ್ಮ ಬಳ್ಳಪ್ಪದವು ಅಧ್ಯಕ್ಷತೆಯನ್ನು ವಹಿಸಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಮೇಶ್ ಪದ್ಮಾರ್ ಹಾಗೂ ಪ್ರಾಂಶುಪಾಲ ಸತೀಶ ವೈ ಕಾರ್ಯಕ್ರಮಕ್ಕೆ ಶುಭÀ ಹಾರೈಸಿದರು. ಮುಖ್ಯೋಪಾಧ್ಯಾಯ ಗಿರೀಶ ಎನ್ ಸ್ವಾಗತಿಸಿ, ಹಿರಿಯ ಅಧ್ಯಾಪಕ ರಾಜಶೇಖರ. ಪಿ ವಂದಿಸಿದರು. ಆಧ್ಯಾಪಿಕೆಯರಾದ ಸವಿತಾ ಹಾಗೂ ಶೀಜಾ ವಿ ನಿರೂಪಿಸಿದರು. ನೌಕರ ಸಂಘದ ಕಾರ್ಯದರ್ಶಿ ರಾಧಾಮಾಧವ ಎ ಸನ್ಮಾನಿತರ ಪರಿಚಯವನ್ನು ಮಾಡಿದರು.
ಅಗಲ್ಪಾಡಿ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ
0
ಜುಲೈ 31, 2022