ನವದೆಹಲಿ: ಕೆ ರೈಲ್ ಯೋಜನೆಯ ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದಂತೆ ಡಿಪಿಆರ್ ಸಾಕಷ್ಟು ವಿವರಗಳನ್ನು ಒಳಗೊಂಡಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಲೋಕಸಭೆಯಲ್ಲಿ ಸಂಸದ ಹೈಬಿ ಈಡನ್ ಅವರ ಪ್ರಶ್ನೆಗಳಿಗೆ ಅವರು ಉತ್ತರಿಸಿದರು.
ಸಿಲ್ವರ್ ಲೈನ್ ಅಧಿಕಾರಿಗಳಲ್ಲಿ ಜೋಡಣೆ ಯೋಜನೆ, ರೈಲ್ವೆ ಭೂಮಿ ಮತ್ತು ಯೋಜನೆಗೆ ಸಂಬಂಧಿಸಿದ ಖಾಸಗಿ ಜಮೀನಿನ ವಿವರಗಳು ಮತ್ತು ಪ್ರಸ್ತುತ ರೈಲ್ವೆ ನೆಟ್‍ವರ್ಕ್‍ನಲ್ಲಿನ ಕ್ರಾಸಿಂಗ್‍ಗಳ ಬಗ್ಗೆ ನಿಖರವಾದ ತಾಂತ್ರಿಕ ದಾಖಲೆಗಳನ್ನು ಕೇಳಲಾಗಿತ್ತು. ಆದರೆ ಅವುಗಳನ್ನುಈ ವರೆಗೂ ಒದಗಿಸಿಲ್ಲ ಎಂದು ಸಚಿವರು ಲೋಕಸಭೆಗೆ ತಿಳಿಸಿದರು.
ಸಂಬಂಧಪಟ್ಟ ಅಧಿಕಾರಿಗಳಿಂದ ನಿಖರವಾದ ವಿವರಗಳನ್ನು ಪಡೆಯಬೇಕಾಗಿದೆ. ಅದರ ನಂತರ, ಮಣ್ಣಿನ ಪರಿಸ್ಥಿತಿಗಳು, ನೈಸರ್ಗಿಕ ಒಳಚರಂಡಿ, ಪರಿಸರ ಸಮಸ್ಯೆಗಳು, ಪರಸ್ಪರ ಕಾರ್ಯಸಾಧ್ಯತೆ ಮತ್ತು ಸಾಲದ ಹೊರೆ ಎಲ್ಲವನ್ನೂ ಅವಲೋಕನ ನಡೆಸಲಾಗುವುದೆಮದು ಅವರು ತಿಳಿಸಿದರು.
ಈ ಯೋಜನೆಗೆ ಸಂಬಂಧಿಸಿದಂತೆ ರೈಲ್ವೇ ಸಚಿವಾಲಯಕ್ಕೆ ಹಲವು ದೂರುಗಳು ಬಂದಿವೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಕೆ ರೈಲ್ ಅಧಿಕಾರಿಗಳಿಂದ ವಿವರಗಳನ್ನು ಪಡೆದ ನಂತರ ದೂರುಗಳಿಗೆ ಕಾರಣವಾದ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು ಎಂದು ಸಚಿವರು ಉತ್ತರಿಸಿದರು.